ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಬಿಐ ಸ್ವಾಯತ್ತತೆ: ಕೇಂದ್ರ ಸರ್ಕಾರದಿಂದ ಅಫಿಡವಿಟ್ ಸಲ್ಲಿಕೆ

ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ...

Rashmi Kasaragodu
Updated On : 3 Jul 2013, 4:01 am

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬುಧವಾರ  ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಅಫಿಡವಿಟ್‌ನಲ್ಲಿರುವ ಪ್ರಧಾನ ಅಂಶಗಳು ಇಂತಿವೆ

-ಪ್ರಧಾನ ಮಂತ್ರಿ, ವಿಪಕ್ಷ ನೇತಾರ ಹಾಗು ಭಾರತದ ಮುಖ್ಯ ನ್ಯಾಯಾಧೀಶರ ಸಮಿತಿ ಸಿಬಿಐ ನಿರ್ದೇಶಕರನ್ನು ನೇಮಕ ಮಾಡತಕ್ಕದ್ದು.

-ರಾಷ್ಟ್ರಪತಿಯವರ ಆದೇಶದ ಮೇರೆಗೆ ಮಾತ್ರ ಸಿಬಿಐ ನಿರ್ದೇಶಕರನ್ನು ವಜಾಗೊಳಿಸಬಹುದು.

-ಸಿಬಿಐ ನಿರ್ದೇಶಕರ ಬಗ್ಗೆ ಪ್ರಶ್ನೆ ಕೇಳಲು ಅಥವಾ ಇನ್ಯಾವುದೇ ರೀತಿಯ ತನಿಖೆ ನಡೆಸಬೇಕಾಗಿ ಬಂದರೆ ಅದಕ್ಕಾಗಿ ಒಂದು ಸಮಿತಿಯನ್ನು ರೂಪಿಸಬೇಕು.

-ಸಿಬಿಐ ನಿರ್ದೇಶಕರ ಅಧಿಕಾರ ಅವಧಿ 2 ವರ್ಷಗಳಿಗಿಂತ ಕಡಿಮೆ ಇರಬಾರದು.

-ಸಿಬಿಐ ನಿರ್ದೇಶಕರು ಐಪಿಎಸ್ ಅಧಿಕಾರಿಯಾಗಿದ್ದು, ಅವರ ಸೇವಾಹಿರಿತನ, ಅನುಭವ ಎಲ್ಲವೂ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು.

ಪ್ರಸ್ತುತ ವಿಷಯದ ಅಂತಿಮ ವಿಚಾರಣೆ ಆಗಸ್ಟ್ 10ರಂದು ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement