ಹೃದಯಾಘಾತದಿಂದ ನಟ ಹೇಮಂತ್ ನಿಧನ
ಕನ್ನಡದ ಯುವ ನಟ ಹೇಮಂತ್ ಅವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ..
ಬೆಂಗಳೂರು: ಕನ್ನಡದ ಯುವ ನಟ ಹೇಮಂತ್ ಅವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
27 ವರ್ಷದ ಹೇಮಂತ್ ಅವರು 'ನೆನಪಿನಂಗಳ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಿನ್ನೆ ಸಂಜೆ ಜಿಮ್ ಮಾಡುತ್ತಿದ್ದ ವೇಳೆ ಹೇಮಂತ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದರು.
ತಮ್ಮ ಮೊದಲ ಚಿತ್ರ 'ನೆನಪಿನಂಗಳ' ಯಶಸ್ಸಿನ ನಂತರ ಹೇಮಂತ್ ಅವರು ಮತ್ತೊಂದು ದೊಡ್ಡ ಬ್ಯಾನರ್ನ ಚಿತ್ರಕ್ಕೆ ಸಿದ್ಧತೆ ನಡೆಸಿದ್ದರು. ಹೇಮಂತ್ ಅವರು 'ನೆನಪಿನಂಗಳ' ಚಿತ್ರದ ನಿರ್ಮಾಕ ಜಿ. ರಾಮಕೃಷ್ಣ ಅವರ ಪುತ್ರ.