ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇಶ್ರತ್ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು: ಶಿಂಧೆ

ಇಶ್ರತ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರ ಗೃಹ..

Mainashree
Updated On : 4 Jul 2013, 3:36 am

ನವದೆಹಲಿ: ಇಶ್ರತ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಗುರುವಾರ ಹೇಳಿದ್ದಾರೆ.

ಇಶ್ರತ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಾ ತನಿಖಾ ದಳ(ಸಿಬಿಐ) ಚಾರ್ಜ್‌ಶೀಟ್ ಸಲ್ಲಿಸಿದ್ದು, ಇಶ್ರತ್ ಎನ್‌ಕೌಂಟರ್ ನಕಲಿ ಎಂದು ಪ್ರತಿಪಾದಿಸಿದೆ.

ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅನೇಕ ಹೆಸರುಗಳನ್ನು ಪ್ರಸ್ತಾಪಿಸಿಲ್ಲ ಎಂದು ಕೇಳಿ ಬಂದ ಆರೋಪವನ್ನು ತಳ್ಳಿ ಹಾಕಿರುವ ಶಿಂಧೆ, ಸತ್ಯಾಂಶವೆಂದು ಸತ್ಯಾವಾಗಿರುತ್ತದೆ. ವಿಷಯಗಳು ಬದಲಾಗುವುದಿಲ್ಲ. ಪ್ರಕರಣದ ಆರೋಪಿಗಳನ್ನು ಶಿಕ್ಷಿಸಲೆಬೇಕು ಎಂದಿದ್ದಾರೆ.

ಕೇಂದ್ರ ಸರ್ಕಾರ ಹೇಳಿದಂತೆ ಸಿಬಿಐ ಕೇಳುತ್ತಿದೆ ಎಂದು ಭಾರತೀಯ ಜನತಾ ಪಕ್ಷಾ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಯಿಸಿರುವ ಶಿಂಧೆ, ಬಿಜೆಪಿ ತಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದೆ. ಸಿಬಿಐ ತನ್ನ ಕರ್ತವ್ಯ ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಹೇಳಿದ್ದಾರೆ.

ನಿನ್ನೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಇಶ್ರತ್ ಎನ್‌ಕೌಂಟರ್ ನಕಲಿ ಎಂದು ಸಿಬಿಐ ಪ್ರತಿಪಾದಿಸಿದೆ. ಇಶ್ರತ್ ಜಹಾನ್ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಬಂದಿದ್ದಳು ಎಂದು ಆರೋಪಿಸಲಾಗಿತ್ತು.

ಐಪಿಎಸ್ ಅಧಿಕಾರಿಗಳಾದ ಪಿ.ಪಿ.ಪಾಂಡೆ ಮತ್ತು ಡಿ.ಜಿ.ವನ್‌ಜಾರಾ ವಿರುದ್ಧ ಅಪಹರಣ, ಕೊಲೆ ಮತ್ತು ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಅವರ ಜತೆಗೆ ಇತರ ಅಧಿಕಾರಿಗಳಾದ ಜಿ.ಎಲ್.ಸಿಂಘಲ್, ತರುಣ್ ಬಾರೊಟ್, ಎನ್.ಕೆ. ಅಮೀನ್, ಜೆ.ಜಿ.ಪರ್ಮಾರ್ ಮತ್ತು ಅಂಜು ಚೌಧರಿ ವಿರುದ್ಧವೂ ಆರೋಪಪಟ್ಟಿ ದಾಖಲಿಸಲಾಗಿದೆ.

ಟೆರರಿಸ್ಟ್ ಅಲ್ಲ
ಚಾರ್ಜ್‌ಶೀಟ್‌ನಲ್ಲಿರುವ ಪ್ರಮುಖ ಅಂಶವೆಂದರೆ ಇಶ್ರತ್ ಜಹಾನ್ ಭಯೋತ್ಪಾದಕಿ ಅಲ್ಲ ಎಂದು ಸಿಬಿಐ ಹೇಳಿಕೊಂಡಿದೆ. ಆಕೆ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯೇ ಆಗಿಲ್ಲ ಎಂದು ತಿಳಿಸಿದೆ. ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ಹಿರಿಯ ಅಧಿಕಾರಿ ಜತೆಗೆ ಇಶ್ರತ್ ಅಹಮದಾಬಾದ್‌ಗೆ ಪ್ರವಾಸ ಬಂದಿದ್ದಳು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement