ಭಾರತಕ್ಕೆ ಚೀನಾದ ಎಚ್ಚರಿಕೆ
ಭಾರತ-ಚೀನಾ ಗಡಿಪ್ರದೇಶದಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಸುಮ್ ಸುಮ್ನೆ ನಮ್ಮನ್ನು ಕೆಣಕಿ ಹೊಸ ಸಮಸ್ಯೆ ಸೃಷ್ಟಿಸುವುದು ಬೇಡ ಎಂದು ...
ಬೀಜಿಂಗ್: ಭಾರತ-ಚೀನಾ ಗಡಿಪ್ರದೇಶದಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಸುಮ್ ಸುಮ್ನೆ ನಮ್ಮನ್ನು ಕೆಣಕಿ ಹೊಸ ಸಮಸ್ಯೆ ಸೃಷ್ಟಿಸುವುದು ಬೇಡ ಎಂದು ಭಾರತಕ್ಕೆ ಚೀನಾ ಎಚ್ಚರಿಕೆ ನೀಡಿದೆ. ಭಾರತದ ರಕ್ಷಣಾ ಸಚಿವ ಎ.ಕೆ ಆಂಟನಿ ಚೀನಾಕ್ಕೆ ಕಾಲಿಡುತ್ತಿದ್ದಾಗಲೇ ಚೀನಾ ಈ ರೀತಿ ಎಚ್ಚರಿಕೆ ನೀಡಿರುವುದು ವಿಪರ್ಯಾಸ.
ಆಂಟನಿ ಚೀನಾಕ್ಕೆ ಕಾಲಿಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಚೀನಾದ ಮೇಜರ್ ಜನರಲ್ ಲೋ ಯಾನ್ , ಭಾರತ ಯೋಚಿಸಿ ಮಾತನಾಡಬೇಕು. ಭಾರತ ಏನು ಮಾಡುತ್ತದೆ, ಏನು ಹೇಳುತ್ತದೆ ಎಂಬುದರ ಬಗ್ಗೆ ಯೋಚನೆ ಮಾಡಬೇಕು ಎಂದು ಖಾರವಾಗಿಯೇ ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಭಾರತ ನೆರೆ ರಾಷ್ಟ್ರಗಳೊಂದಿಗೆ ಶಾಂತಿಯುತವಾಗಿ ವ್ಯವಹರಿಸಬೇಕು ಎಂದು ಲೋ ಹೇಳಿದ್ದಾರೆ.
ವಿಶೇಷವಾಗಿ, ಭಾರತ ಗಡಿಪ್ರದೇಶದಲ್ಲಿ ಸೇನೆಯನ್ನು ನಿಯೋಜನೆ ಮಾಡುವ ಮೂಲಕ ಹೊಸ ಸಮಸ್ಯೆಯನ್ನು ಸೃಷ್ಟಿಸಬಾರದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.