ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರೇಲ್ವೇ ಲಂಚ ಪ್ರಕರಣ: ಬನ್ಸಾಲ್ ವಿಚಾರಣಾಧೀನ ಸಾಕ್ಷಿ

ರೇಲ್ವೆ ಲಂಚ ಪ್ರಕರಣದಲ್ಲಿ ರೇಲ್ವೇ ಮಾಜಿ ಸಚಿವ ಪವನ್ ಕುಮಾರ್ ಬನ್ಸಾಲ್ ಅವರನ್ನು ಸಿಬಿಐ ವಿಚಾರಣಾಧೀನ ಸಾಕ್ಷಿ ಎಂದು ಪರಿಗಣಿಸಿದೆ...

Rashmi Kasaragodu
Updated On : 4 Jul 2013, 7:07 am

ನವದೆಹಲಿ: ರೇಲ್ವೆ ಲಂಚ ಪ್ರಕರಣದಲ್ಲಿ ರೇಲ್ವೇ ಮಾಜಿ ಸಚಿವ ಪವನ್ ಕುಮಾರ್  ಬನ್ಸಾಲ್ ಅವರನ್ನು ಸಿಬಿಐ ವಿಚಾರಣಾಧೀನ ಸಾಕ್ಷಿ ಎಂದು ಪರಿಗಣಿಸಿದೆ.

ಪ್ರಸ್ತುತ ಪ್ರಕರಣದ ಬಗ್ಗೆ ಸಿಬಿಐ ಆರೋಪಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಸಿಬಿಐ ಬನ್ಸಾಲ್ ಅವರನ್ನು ವಿಚಾರಣಾಧೀನ ಸಾಕ್ಷಿ ಎಂದು ಹೇಳಿದೆ. ಈ ಪ್ರಕರಣದಲ್ಲಿ ಬನ್ಸಾಲ್ ಅವರ ಅಳಿಯ ವಿಜಯ್ ಸಿಂಗ್ಲಾ ಮತ್ತು ರೇಲ್ವೇ ಮಂಡಳಿ ಸದಸ್ಯ ಮಹೇಶ್ ಕುಮಾರ್ ಆರೋಪಿಗಳು ಎಂದು ಸಿಬಿಐ ಹೇಳಿತ್ತು.

ವಿಶೇಷ ಸಿಬಿಐ ನ್ಯಾಯಾಧೀಶರಿಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಿಬಿಐ 10 ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ. ಆರೋಪಿಗಳಾದ ಮಹೇಶ್ ಕುಮಾರ್, ಸಿಂಗ್ಲಾ, ಮಧ್ಯವರ್ತಿ ಸಂದೀಪ್ ಗೋಯಲ್, ಸಮೀಪ್ ಸಂಧೀರ್, ಸುಶೀವ್ ದಾಗಾ, ಅಜಯ್ ಗರ್ಗ್ , ರಾಹುಲ್ ಯಾದವ್, ಉದ್ಯಮಿ ನಾರಾಯಣ್ ರಾವ್ ಮಂಜುನಾಥ್ ಮತ್ತು ಆತನ ಸಹಾಯಕ ಎಂ.ವಿ ಮುರಳಿ ಕೃಷ್ಣ ಮತ್ತು ಸಿ.ವಿ ವೇಣುಗೋಪಾಲ್ ಮೊದಲಾದವರ ಹೆಸರು ಆರೋಪಪಟ್ಟಿಯಲ್ಲಿದೆ.

ಆದಾಗ್ಯೂ, ಲಂಚ ಹಸ್ತಾಂತರಿಸಿದ ಇಬ್ಬರು ಕೊರಿಯರ್ ಕಳುಹಿಸುವ ವ್ಯಕ್ತಿಗಳ ಹೆಸರನ್ನು ಆರೋಪಪಟ್ಟಿಯಲ್ಲಿ ಸಿಬಿಐ ಉಲ್ಲೇಖಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement