ವೇದಿಕೆ ಹಂಚಿಕೊಂಡ ಸಿಬಲ್ ಮತ್ತು ನಿತೀಶ್ ಕುಮಾರ್
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಬುಧವಾರ ವೇದಿಕೆ ಹಂಚಿಕೊಳ್ಳುವ ಮೂಲಕ...
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಬುಧವಾರ ವೇದಿಕೆ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಪಾಟ್ನಾದಲ್ಲಿ ಟೆಕ್ನಾಲಜಿ ಇನ್ಸಿಟ್ಯೂಟ್ವೊಂದಕ್ಕೆ ಶಿಲಾನ್ಯಾಸ ಮಾಡುವ ಕಾರ್ಯಕ್ರಮವೊಂದರಲ್ಲಿ ಇಬ್ಬರು ನಾಯಕರು ಮುಖಾಮುಖಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ನ್ನು ಹೊಗಳಿದ್ದು, ಬಿಹಾರಕ್ಕೆ ವಿಶೇಷ ಮಾನ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಹಳೆಯದ್ದಾಗಿದ್ದರೂ, ಕಾಂಗ್ರೆಸ್ ನಾಯಕನೊಂದಿಗೆ ಬಿಹಾರ ಸಿಎಂಗಿರುವ ನಂಟು ಇಲ್ಲಿ ಸುದ್ದಿಗೆ ಗ್ರಾಸವಾಗಿದೆ.
ನಿತೀಶ್ ಕುಮಾರ್ ಅವರ ಜನತಾದಳ (ಸಂಯುಕ್ತ) ಬಿಜೆಪಿಯೊಂದಿಗೆ 17 ವರ್ಷಗಳ ಕಾಲವಿದ್ದ ನಂಟು ಕಳೆದುಕೊಂಡಿರುವುದರಿಂದ, ಪ್ರಸ್ತುತ ಪಕ್ಷ ಕಾಂಗ್ರೆಸ್ನತ್ತ ಒಲವು ತೋರುತ್ತಿದೆಯೆ? ಎಂಬ ಪ್ರಶ್ನೆ ಇಲ್ಲಿ ಕಾಡುತ್ತಿದೆ.
ಏತನ್ಮಧ್ಯೆ, 2002ರಲ್ಲಿ ಗುಜರಾತ್ನಲ್ಲಿ ನಡೆದ ಕೋಮುಗಲಭೆಯನ್ನು ತಡೆಯಲು ಮೋದಿ ಪ್ರಯತ್ನಿಸಿಲ್ಲ ಎಂದು ನಿತೀಶ್ ಆರೋಪಿಸಿದ್ದರು. ಆದಾಗ್ಯೂ, ಬಿಜೆಪಿಯೊಂದಿಗೆ ಸ್ನೇಹ ಕಳೆದುಕೊಂಡಿರುವ ನಿತೀಶ್ ಕುಮಾರ್ , ಕಾಂಗ್ರೆಸ್ ನಾಯಕರನ್ನು ಹೊಗಳಿರುವುದರಿಂದ ನಿತೀಶ್ ಅವರ ಮುಂದಿನ ನಡೆ ಏನೆಂಬುದು ಕುತೂಹಲ ಸೃಷ್ಟಿಸಿದೆ.