ಇಶ್ರತ್ ಜಹಾನ್‌ಗೆ ಉಗ್ರರ ಸಂಪರ್ಕವಿತ್ತು: ಉಗ್ರ ಹೆಡ್ಲಿ
ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಮುಂಬೈ ದಾಳಿಯ ರುವಾರಿ ಡೇವಿಡ್ ...
ನವದೆಹಲಿ: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಮುಂಬೈ ದಾಳಿಯ ರುವಾರಿ ಡೇವಿಡ್ ಕೊಲೆಮಾನ್ ಹೆಡ್ಲಿ ಇಶ್ರತ್ ಜಹಾನ್‌ಗೆ ಉಗ್ರರ ಸಂಪರ್ಕವಿತ್ತು ಎಂದು ಶುಕ್ರವಾರ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಹೇಳಿದ್ದಾನೆ.
ಇಶ್ರತ್ ಆತ್ಮಾಹುತಿ ಬಾಂಬ್ ಸ್ಫೋಟಿಸಲು ಯತ್ನಿಸಿದ್ದಳು. ಉಗ್ರರರೊಡನೆ ಇಶ್ರತ್‌ಗೆ ಸಂಪರ್ಕವಿದ್ದು, ಆಕೆಯನ್ನು ಮಾನವ ಬಾಂಬ್ ಸ್ಫೋಟಕ್ಕಾಗಿ ಲಕ್ಷರ್-ಇ-ತೊಯ್ಬಾ ಉಗ್ರ ಸಂಘಟನೆಯ ಝಕಿರ್-ರಹಮಾನ್ ಲಕ್ವಿ ಅವರು ನೇಮಕ ಮಾಡಲಾಗಿತ್ತು ಎಂದು ಹೆಡ್ಲಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಇಶ್ರತ್‌ಗೆ ಉಗ್ರರ ಸಂಪರ್ಕವಿತ್ತು ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಇಶ್ರತ್ ಪ್ರಕರಣ ತುಂಬಾ ಗೊಂದಲವನ್ನು ಸೃಷ್ಟಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ದಿನ ವಿಭಿನ್ನ ಹೇಳಿಕೆಗಳು ಬರುತ್ತಿದ್ದು ಜನರನ್ನು ಗೊಂದಲಕ್ಕೀಡು ಮಾಡಲಾಗಿದೆ. ಇದರ ಬಗ್ಗೆ ಗೃಹ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು. ಎನ್‌ಐಎ ತಂಡ ಇಶ್ರತ್ ಪ್ರಕರಣದ ಬಗ್ಗೆ ಅಮೆರಿಕಾದ ವಶದಲ್ಲಿರುವ ಹೆಡ್ಲಿಯನ್ನು ವಿಚಾರಣೆಗೊಳಪಡಿಸಿರುವುದರ ಬಗ್ಗೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ.
ಇಶ್ರತ್ ಜಹಾನ್ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಬಂದಿದ್ದಳು ಎಂದು ಆರೋಪಿಸಿ ಆಕೆಯನ್ನು ಎನ್‌ಕೌಂಟರ್ ಮಾಡಲಾಗಿತ್ತು.
ಈ ಸಂಬಂಧ ತನಿಖೆ ಕೈಗೊಂಡಿರುವ ಕೇಂದ್ರಾ ತನಿಖಾ ದಳ(ಸಿಬಿಐ) ಇಶ್ರತ್ ಎನ್‌ಕೌಂಟರ್ ನಕಲಿ ಎಂದು ಪ್ರತಿಪಾದಿಸಿ, ಮ್ಯಾಜಿಸ್ಟೇಟ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.