ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭಾರತ-ಪಾಕ್ ಪಂದ್ಯ ನಡೆಯದಿದ್ದರೆ 80 ಮಿಲಿಯನ್ ಡಾಲರ್ ನಷ್ಟ

Mainashree
Updated On : 5 Jul 2013, 5:25 am

ಕರಾಚಿ: ಭಾರತ - ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಾವಳಿಗಳು ನಡೆಯದೇ ಇದ್ದುದ್ದರಿಂದ ಪಾಕಿಸ್ತಾನಕ್ಕೆ 80 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಶುಕ್ರವಾರ ಹೇಳಿದೆ.

ಕಳೆದು ತಿಂಗಳು ಅಂತ್ಯಗೊಂಡ ದುಬೈ ಮೂಲದ ಟೆನ್ ಸ್ಪೋರ್ಟ್ಸ್‌ನೊಂದಿಗಿನ ಪ್ರಸಾರ ಒಪ್ಪಂದದ ಪ್ರಕಾರ, ಪಿಸಿಬಿ 80 ಮಿಲಿಯನ್ ಡಾಲರ್ ನಷ್ಟ ಅನುಭವಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪಾಕ್‌ನಲ್ಲಿ ಉಭಯ ದೇಶಗಳ ನಡುವೆ ಯಾವುದೇ ಪಂದ್ಯ ನಡೆದಿಲ್ಲ. ಇದರಿಂದ ಪಿಸಿಬಿಗೆ 80 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಪಿಸಿಬಿಯ ಹಿರಿಯ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪಿಸಿಬಿ ಮತ್ತು ಟೆನ್ ಸ್ಪೋರ್ಟ್ಸ್ ನಡುವೆ ಸ್ವದೇಶದಲ್ಲಿ ಒಟ್ಟು ಎರಡು ಪಂದ್ಯಾವಳಿಗಾಗಿ 135 ಮಿಲಿಯನ್ ಡಾಲರ್ ಒಪ್ಪಂದವಾಗಿತ್ತು. ಪಂದ್ಯ ಪ್ರಸಾರ ಒಪ್ಪಂದದ ಪ್ರಕಾರ ಕಳೆದ 4 ವರ್ಷಗಳಲ್ಲಿ ಭಾರತ-ಪಾಕ್ ನಡುವೆ ಎರಡು ಪಂದ್ಯಾವಳಿ ಆಡಬೇಕಿತ್ತು. ಆದರೆ ಯಾವುದೇ ಪಂದ್ಯ ನಡೆಯದ ಹಿನ್ನಲೆಯಲ್ಲಿ ಪಾಕಿಸ್ತಾನ 80 ಮಿಲಿಯನ್ ನಷ್ಟ ಅನುಭವಿಸಿದೆ ಎಂದು ಪಿಸಿಬಿ ಹೇಳಿದೆ.

2009ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಪಾಕ್‌ನಲ್ಲಿ ಯಾವುದೇ ಕ್ರಿಕೆಟ್ ಪಂದ್ಯಾವಳಿ ನಡೆದಿಲ್ಲ. ಇದಲ್ಲದೇ ಪಾಕ್ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಒಪ್ಪಂದಗಳು ನಡೆಯದಾ ಹಿನ್ನಲೆಯಲ್ಲಿ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement