ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರೈನಾ, ಜಡೇಜಾ ನಡುವೆ ವಾಗ್ವಾದ

ಶುಕ್ರವಾರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಕ್ರಿಕೆಟ್ ಪಂದ್ಯದಲ್ಲಿ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ನಡುವೆ ಮಾತಿನ ಚಕಮಕಿ...

Rashmi Kasaragodu
Updated On : 6 Jul 2013, 7:12 am

ನವದೆಹಲಿ: ಶುಕ್ರವಾರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಕ್ರಿಕೆಟ್ ಪಂದ್ಯದಲ್ಲಿ  ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ನಡುವೆ ಮಾತಿನ ಚಕಮಕಿ ನಡೆದಿದೆ.

26 ಮತ್ತು 32ನೇ ಓವರ್‌ನಲ್ಲಿ ಜಡೇಜಾ ಎಸೆದ ಬಾಲ್‌ನ್ನು ಎರಡು ಬಾರಿ ಕ್ಯಾಚ್ ಕೈ ಚೆಲ್ಲಿದ್ದಕ್ಕಾಗಿ ರೈನಾ ವಿರುದ್ಧ ಜಡೇಜಾ ಸಿಟ್ಟಾಗಿದ್ದಾರೆ.

26ನೇ ಓವರ್‌ನಲ್ಲಿ ಕೇಮರ್ ರೋಚ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕ್ಯಾಚ್ ಬಿಟ್ಟ ಕಾರಣ ಅಲ್ಲಿ ವಿಕೆಟ್ ಉರುಳುವ ಸಾಧ್ಯತೆ ಮಿಸ್ ಆಗಿಬಿಟ್ಟಿತ್ತು.

ನಂತರ 32ನೇ ಓವರ್‌ನಲ್ಲಿ ಸುನಿಲ್ ನರೈನ್ ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ಭುವನೇಶ್ವರ್ ಮತ್ತು ರೈನಾ ಇಬ್ಬರೂ ಗೊಂದಲಕ್ಕೀಡಾಗಿ ಕ್ಯಾಚ್ ಕೈ ಚೆಲ್ಲಿದ್ದರು.

ಇದಾದ ನಂತರ ಸಿಟ್ಟಿಗೆದ್ದ ಜಡೇಜಾ ರೈನಾ ಜತೆ ವಾಗ್ವಾದಕ್ಕಿಳಿದಿದ್ದಾರೆ. ಇಬ್ಬರ ನಡುವಿನ ಮಾತಿನ ಚಕಮಕಿ ನಾಯಕ ವಿರಾಟ್ ಕೊಹ್ಲಿಯ ಮಧ್ಯಸ್ಥಿಕೆಯಲ್ಲಿ ಅಂತ್ಯ ಕಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement