ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉತ್ತರಾಖಂಡ: ಪರಿಹಾರ ಕಾರ್ಯಾಚರಣೆಗೆ ಮಳೆ ಅಡ್ಡಿ

ಪ್ರಳಯ ಪೀಡಿತ ಉತ್ತರಾಖಂಡದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಪರಿಣಾಮ ಪರಿಹಾರ ಕಾರ್ಯಚರಣೆ...

Rashmi Kasaragodu
Updated On : 7 Jul 2013, 6:12 am

ಡೆಹ್ರಾಡೂನ್: ಪ್ರಳಯ ಪೀಡಿತ ಉತ್ತರಾಖಂಡದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಪರಿಣಾಮ ಪರಿಹಾರ ಕಾರ್ಯಚರಣೆಗೆ ಧಕ್ಕೆಯುಂಟಾಗಿದೆ.

ರುದ್ರಪ್ರಯಾಗ್, ಉತ್ತರಕಾಶಿ ಮತ್ತು ಚಮೋಲಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪರಿಹಾರ ಸಾಮಾಗ್ರಿಗಳನ್ನೊದಗಿಸುತ್ತಿರುವ ಹೆಲಿಕಾಪ್ಟರ್ ಹಾರಾಟಕ್ಕೆ ಅಡಚಣೆಯುಂಟಾಗಿದೆ.

ಮಳೆಯಿಂದಾಗಿ ರಸ್ತೆಗಳು ಕೆಟ್ಟುಹೋಗಿದ್ದು ಸಂಚಾರಕ್ಕೆ ತಡೆಯುಂಟು ಮಾಡಿವೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಸಾಮಾಗ್ರಿಗಳನ್ನು ಸಾಗಿಸುವುದು ಕಷ್ಟವಾಗಿದೆ. ರಸ್ತೆ, ಸೇತುವೆಗಳು ಜಲಾವೃತವಾಗಿರುವುದರಿಂದ ಹೆಲಿಕಾಪ್ಟರ್ ಮೂಲಕವೇ ಆಹಾರ ಸಾಮಾಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಈಗ ಹೆಲಿಕಾಪ್ಟರ್ ಹಾರಾಟವೂ  ಅಸಾಧ್ಯವಾಗಿರುವುದರಿಂದ ಪ್ರಸ್ತುತ ಪ್ರದೇಶದ ಜನರು ಕಂಗಾಲಾಗಿದ್ದಾರೆ.

ಏತನ್ಮಧ್ಯೆ, ರಾಜ್ಯ ವಿಪತ್ತ ನಿರ್ವಹಣಾ ಅಧಿಕಾರಿಗಳು ಸಭೆ ನಡೆಸಿ ಹವಾಮಾನ ವೈಪರೀತ್ಯದಲ್ಲೂ ಹೆಲಿಕಾಪ್ಟರ್ ಹಾರಾಟ ಮುಂದುವರಿಸುವುದು ಹೇಗೆ? ಎಂಬುದರ ಬಗ್ಗೆ  ಚರ್ಚೆ ನಡೆಸಿದ್ದಾರೆ.

ಅದೇ ವೇಳೆ ಕೇದಾರಘಾಟಿಯಲ್ಲಿ ಪ್ರಳಯಕ್ಕೆ ಸಿಲುಕಿ ಮೃತಪಟ್ಟವರ ಶವವನ್ನು ಹೊರತೆಗೆಯುವುದು ಕೂಡಾ ಕಷ್ಟವಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

ಒಟ್ಟಿನಲ್ಲಿ ಉತ್ತರಾಖಂಡದಲ್ಲಿನ ಕುಂಭದ್ರೋಣ ಮಳೆಯಿಂದಾಗಿ ಪರಿಹಾರ ಕಾರ್ಯಾಚರಣೆಗಳು ಸದ್ಯ ಸ್ಥಗಿತಗೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement