ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನರೇಂದ್ರ ಮೋದಿ ವಿರುದ್ಧ ಮಾಯಾ ವಾಗ್ದಾಳಿ

ಉತ್ತರಾಖಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು 15,000 ಗುಜರಾತಿಗಳನ್ನು ರಕ್ಷಿಸಿದ್ದಾರೆ ಎಂಬ ವರದಿಗೆ ...

Rashmi Kasaragodu
Updated On : 7 Jul 2013, 6:59 am

ಲಕ್ನೋ : ಉತ್ತರಾಖಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು 15,000 ಗುಜರಾತಿಗಳನ್ನು ರಕ್ಷಿಸಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಬಿಎಸ್ಪಿ ನಾಯಕಿ ಮಾಯಾವತಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಪಟ್ಟದ ಆಕಾಂಕ್ಷಿಯಾಗಿರುವ ಮೋದಿಯವರು ತನ್ನ ರಾಜ್ಯದ ಜನರನ್ನು ಮಾತ್ರ ರಕ್ಷಿಸಿರುವುದು ಸರಿಯಲ್ಲ ಎಂದು ಮಾಯಾ ಕಿಡಿ ಕಾರಿದ್ದಾರೆ.

ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿರುವ ಒಬ್ಬ ವ್ಯಕ್ತಿ ತನ್ನ ರಾಜ್ಯದ ಮಂದಿಯನ್ನು ಮಾತ್ರ ರಕ್ಷಿಸಲು ಮುಂದಾಗಿರುವುದನ್ನು ನಾವು ಖಂಡಿಸುತ್ತೇವೆ ಎಂದು ಬಿಎಸ್ಪಿ ನಾಯಕಿ ಹೇಳಿದ್ದಾರೆ.

ತನ್ನ ರಾಜ್ಯದ ಮಂದಿಯನ್ನು ಮಾತ್ರ ಕಾಪಾಡುವ ಮೂಲಕ ಮೋದಿ ತಾರತಮ್ಯವೆಸಗಿದ್ದಾರೆ ಎಂದು ಮಾಯಾ ಮೋದಿ ವಿರುದ್ದ ಟೀಕಾಪ್ರಕಾರ ನಡೆಸಿದ್ದಾರೆ.

ಇಂಥಾ ಸಂಕುಚಿತ ಮನೋಭಾವವಿರುವ ವ್ಯಕ್ತಿ ಪ್ರಧಾನಿ ಹುದ್ದೆಗೆ ಏರಬಾರದು. ಈ ವಿಷಯವನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದು ರಮಾಭಾಯಿ ಅಂಬೇಡ್ಕರ್ ಮೈದಾನದಲ್ಲಿ ನಡೆದ ಬ್ರಾಹ್ಮಣ್ ಭಾಯಿಚರಣ್ ಸಮ್ಮೇಳನದಲ್ಲಿ ಮಾಯಾ ಹೇಳಿದ್ದಾರೆ.

ಅದೇ ವೇಳೆ ವಿಪತ್ತು ನಿರ್ವಹಣಾ ಕಾರ್ಯದಲ್ಲಿಯೂ ಕೆಲವೊಂದು ರಾಜಕೀಯ ಪಕ್ಷಗಳು ರಾಜಕೀಯ ತಾರತಮ್ಯ ತೋರಿರುವ ಬಗ್ಗೆ ಮಾಯಾ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಾತ್ರವಲ್ಲದೆ ಉತ್ತರಾಖಂಡದಲ್ಲಿ ವಿಪತ್ತಿಗೊಳಗಾಗಿರುವ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಮಾಯಾ ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement