ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಹಾರಕ್ಕೆ ಉಗ್ರ ಬೆದರಿಕೆ: ಗುಪ್ತಚರ ಇಲಾಖೆ

ಬೋಧ್‌ಗಯಾ ದೇಗುಲದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಬಿಹಾರಕ್ಕೆ ಇಬ್ಬರು ಉಗ್ರರು ಲಗ್ಗೆಯಿಟ್ಟಿದ್ದಾರೆ ...

Rashmi Kasaragodu
Updated On : 7 Jul 2013, 4:48 am

ಪಾಟ್ನಾ: ಬೋಧ್‌ಗಯಾ ದೇಗುಲದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಬಿಹಾರಕ್ಕೆ ಇಬ್ಬರು ಉಗ್ರರು ಲಗ್ಗೆಯಿಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಉಗ್ರರು ಪಾಟ್ನಾ ಮತ್ತು ಇನ್ನಿತರ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ  ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಮಾಹಿತಿ ರವಾನಿಸಿದೆ.

ಸರ್ಫುಲ್ ರೆಹಮಾನ್ ಮತ್ತು ಸಾಹಿದುರ್ ರೆಹಮಾನ್ ಎಂಬ ಸಹೋದರರು ಜುಲೈ ಆರಂಭದಲ್ಲಿ ಬಿಹಾರಕ್ಕೆ ಕಾಲಿಟ್ಟಿದ್ದು ಈ ಉಗ್ರರ ಬಗ್ಗೆ ಎಚ್ಚರವಹಿಸಿ ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಹೇಳಿದೆ. ಇವರಿಬ್ಬರೂ ಬಿಹಾರ ಮೂಲದವರೇ ಆಗಿದ್ದರೂ, ಸ್ಕಾಟ್‌ಲ್ಯಾಂಡ್ ಮತ್ತು ಸೌದಿ ಅರೇಬಿಯಾದಲ್ಲಿ ನೆಲೆಸಿದ್ದರು ಎಂದು ಗುಪ್ತಚರ ಇಲಾಖೆ ಹೇಳಿದೆ.

ಉಗ್ರರು ರಾಜ್ಯಕ್ಕೆ ನುಸುಳಿರುವುದರಿಂದ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸವಾಗಿದೆ ಎಂದು ಪಾಟ್ನಾ ಎಸ್‌ಎಸ್‌ಪಿ ಮನು ಮಹಾರಾಜ್ ಅವರು ಜೂನ್ 21ಕ್ಕೆ ಎಲ್ಲ ಡಿಎಸ್ಪಿ ಮತ್ತು ರಾಜ್ಯದ ಉನ್ನತಾಧಿಕಾರಿಗಳಿಗೆ  ಸಂದೇಶ ಕಳುಹಿಸಿದ್ದರು.

ಇದೀಗ ಬಿಹಾರದಲ್ಲಿನ ಪ್ರಧಾನ ದೇವಾಲಯ ಹಾಗು ಜನನಿಬಿಡ ಪ್ರದೇಶಗಳಲ್ಲಿ ಉಗ್ರ ದಾಳಿಯ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement