ಚುನಾವಣಾ ಸಮೀಕ್ಷೆಗೆ ಬಿಜೆಪಿ ಸಿದ್ಧ
ತಾವು ಚುನಾವಣಾ ಸಮೀಕ್ಷೆಗೆ ಸಿದ್ಧ ಎಂದು ಬಿಜೆಪಿ ಹೇಳಿದೆ. ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿಗ ಬಿಜೆಪಿ ...
ನವದೆಹಲಿ: ತಾವು ಚುನಾವಣಾ ಸಮೀಕ್ಷೆಗೆ ಸಿದ್ಧ ಎಂದು ಬಿಜೆಪಿ ಹೇಳಿದೆ. ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿಗ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಆಡಳಿತಾರೂಢ ಕಾಂಗ್ರೆಸ್ ಪಕ್ಷ ತಮ್ಮ ಮಿತ್ರ ಪಕ್ಷಗಳಿಂದಲೇ ಒತ್ತಡ ಅನುಭವಿಸುತ್ತಿದ್ದು, ಬಿಜೆಪಿ ಚುನಾವಣಾ ಸಮೀಕ್ಷೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಯುಪಿಎ ಒತ್ತಡದಲ್ಲಿದ್ದು, ಪ್ರಸ್ತುತ ಪಕ್ಷ ದೇಶದ ಜನತೆಗೆ ಮುಖ ತೋರಿಸಲು ಕಷ್ಟಪಡುತ್ತಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.
ಮುಂದಿನ ಚುನಾವಣೆಗೆ ಬಿಜೆಪಿ ಯಾವ ರೀತಿಯಲ್ಲಿ ಸಿದ್ಧತೆ ನಡೆಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಪಕ್ಷವು ಭ್ರಷ್ಟಾಚಾರ, ಆರ್ಥಿಕ ನೀತಿ, ಬೆಲೆ ಏರಿಕೆ ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ಹೋರಾಡಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಚುನಾವಣೆಗೆ ಸಿದ್ಧವಾಗಿದೆ. ನಾವು ಚುನಾವಣಾ ಸಮೀಕ್ಷೆಗೂ ಸಿದ್ಧವಾಗಿದ್ದೇವೆ. ನಮ್ಮ ಪಕ್ಷ ದೇಶಾದ್ಯಂತ 100ಕ್ಕಿಂತಲೂ ಹೆಚ್ಚು ರ್ಯಾಲಿ ನಡೆಸಲು ಸಿದ್ಧತೆ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಲೋಕಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ವಿವರಿಸಿದ ಅನಂತ ಕುಮಾರ್, ನಾವು ದೇಶಾದ್ಯಂತ ರ್ಯಾಲಿಗಳನ್ನು ಹಮ್ಮಿಕೊಳ್ಳಲಿದ್ದು, ಪಕ್ಷವನ್ನು ಸಂಘಟಿಸಲು ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಹೇಳಿದ್ದಾರೆ.