ಜಡೇಜಾ- ರೈನಾ ಮಾತಿನ ಚಕಮಕಿ: ವಿವರಣೆ ಕೇಳಿದ ಬಿಸಿಸಿಐ
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ನಡುವೆ ನಡೆದ ಮಾತಿನ ಚಕಮಕಿ ಬಗ್ಗೆ ಬಿಸಿಸಿಐ...
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ನಡುವೆ ನಡೆದ ಮಾತಿನ ಚಕಮಕಿ ಬಗ್ಗೆ ಬಿಸಿಸಿಐ ವಿವರಣೆ ಕೇಳಿದೆ.
ಈ ಬಗ್ಗೆ ಬಿಸಿಸಿಐ ಜಡೇಜಾ ಅವರಲ್ಲಿ ಲಿಖಿತ ವಿವರಣೆಯನ್ನು ಕೇಳಿದೆ.
ಇದೀಗ ನಡೆಯುತ್ತಿರುವ ತ್ರಿಕೋಣ ಸರಣಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯ ನಡೆಯುತ್ತಿದ್ದ ವೇಳೆ ರೈನಾ ಎರಡು ಕ್ಯಾಚ್ಗಳನ್ನು ಕೈ ಚೆಲ್ಲಿದ್ದರು. ಇದರಿಂದ ಸಿಟ್ಟುಗೊಂಡ ಜಡೇಜಾ ರೈನಾ ಜತೆ ಮಾತಿನ ಚಕಮಕಿ ನಡೆಸಿದ್ದರು.
ಕೊನೆಗೆ ನಾಯಕ ವಿರಾಟ್ ಕೊಹ್ಲಿ ಮಧ್ಯ ಪ್ರವೇಶಿಸಿ ರೈನಾ ಜಡೇಜಾ ಅವರ ವಾಗ್ವಾದಕ್ಕೆ ಅಂತ್ಯ ಹಾಡಿದ್ದರು.