ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೋಧ್‌ಗಯಾ ಸ್ಫೋಟದಲ್ಲಿ ಮೋದಿ ಕೈವಾಡ: ದಿಗ್ವಿಜಯ್ ಸಿಂಗ್

ಬಿಹಾರದ ಬೋಧ್‌ಗಯಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ...

Rashmi Kasaragodu
Updated On : 8 Jul 2013, 4:15 am

ನವದೆಹಲಿ: ಬಿಹಾರದ ಬೋಧ್‌ಗಯಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕೈವಾಡ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನೇತಾರ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಈ ಮೂಲಕ ದಿಗ್ವಿಜಯ್ ಸಿಂಗ್ ಸೋಮವಾರ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

ಪ್ರಸ್ತುತ ಬಾಂಬ್ ಸ್ಫೋಟದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕೈವಾಡವಿರುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಹೇಳಿದ್ದರೂ, ಇಷ್ಟು ಬೇಗ ಉಗ್ರ ದಾಳಿಯೊಂದರಲ್ಲಿ ಮುಸ್ಲಿಂ ಸಂಘಟನೆಯ ಕೈವಾಡವಿದೆ ಎಂದು ಸಂಶಯಿಸುವುದು ತಪ್ಪು ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಅದೇ ವೇಳೆ ಬಾಂಬ್ ಸ್ಫೋಟದಲ್ಲಿ ಮೋದಿಯವರ ಕೈವಾಡವಿದೆ ಎಂಬುದಕ್ಕೆ ದಿಗ್ವಿಜಯ್ ವಿವರಣೆಯನ್ನೂ ಕೊಟ್ಟಿದ್ದಾರೆ. ಅದೇನೆಂದರೆ ಮೋದಿ, ನಿತೀಶ್ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ ಬೆನ್ನಲ್ಲೇ ಈ ಕೃತ್ಯ ನಡೆದಿದೆ.

ದಿಗ್ವಿಜಯ್ ಅವರು ಟ್ವೀಟರ್‌ನಲ್ಲಿ " ಅಮಿತ್ ಶಾ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಬಗ್ಗೆ ಹೇಳಿದ್ದಾರೆ. ಮೋದಿಯವರು ನಿತೀಶ್‌ಗೆ ತಕ್ಕ ಪಾಠ ಕಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇದಾದ ಮರುದಿನವೇ ಬೋಧ್‌ಗಯಾದಲ್ಲಿರುವ ಮಹಾಬೋಧಿ ದೇಗುಲದಲ್ಲಿ ಬಾಂಬ್ ಸ್ಫೋಟ ಸಂಭವಿಸಿತು. ಹಾಗಾದರೆ ಮೋದಿಯವರಿಗೆ ಬಾಂಬ್‌ಸ್ಫೋಟದಲ್ಲಿ ಕೈವಾಡವಿದೆಯೆ? ನನಗೆ ಗೊತ್ತಿಲ್ಲ...ರಾಷ್ಟ್ರೀಯ ತನಿಖಾ ದಳ ತನಿಖೆ ಪೂರ್ಣಗೊಳಿಸಲಿ ಎಂದು ಟ್ವೀಟ್ ಮಾಡಿರುವುದು ಇದೀಗ ವಿವಾದಕ್ಕೆಡೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement