ಬೋಧ್ಗಯಾದಲ್ಲಿ 13 ಬಾಂಬ್ಗಳನ್ನಿರಿಸಲಾಗಿತ್ತು: ಶಿಂದೆ
ಬೋಧ್ಗಯಾದಲ್ಲಿನ ಮಹಾಬೋಧಿ ದೇಗುಲದ ವಠಾರದೊಳಗೆ ಒಟ್ಟು 13 ಬಾಂಬ್ಗಳನ್ನಿರಿಸಲಾಗಿತ್ತು. ಇದರಲ್ಲಿ 10 ಬಾಂಬ್...
ತಲೆಗಾಂವ್: ಬೋಧ್ಗಯಾದಲ್ಲಿನ ಮಹಾಬೋಧಿ ದೇಗುಲದ ವಠಾರದೊಳಗೆ ಒಟ್ಟು 13 ಬಾಂಬ್ಗಳನ್ನಿರಿಸಲಾಗಿತ್ತು. ಇದರಲ್ಲಿ 10 ಬಾಂಬ್ಗಳು ಸ್ಫೋಟಗೊಂಡಿವೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಸೋಮವಾರ ಹೇಳಿದ್ದಾರೆ.
ಭಾನುವಾರ ಬೋಧ್ಗಯಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 2 ಬೌದ್ಧ ಬಿಕ್ಷುಗಳಿಗೆ ಗಾಯಗಳಾಗಿದ್ದುವು.
ಮಹಾಬೋಧಿ ದೇಗುಲದಲ್ಲಿ 10 ಬಾಂಬ್ ಸ್ಫೋಟಗೊಂಡಿದೆ ಎಂದು ನನಗೆ ಮಾಹಿತಿ ಲಭಿಸಿದೆ. ಅಲ್ಲಿ ಒಟ್ಟು 13 ಬಾಂಬ್ಗಳನ್ನಿರಿಸಲಾಗಿತ್ತು. ಅವುಗಳನ್ನು ಎಲ್ಲೆಲ್ಲ ಇರಿಸಲಾಗಿತ್ತು ಎಂಬುದರ ಬಗ್ಗೆ ನನಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಾಂಬ್ ಸ್ಫೋಟದಲ್ಲಿ 50ರ ಹರೆಯದ ದೋರ್ಜಿ ಮತ್ತು ಬಾಲ ಸಂಗ (30) ಎಂಬವರಿಗೆ ಗಾಯಗಳಾಗಿವೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಿಂದೆ ಹೇಳಿದ್ದಾರೆ.
ತಲೆಗಾಂವ್ನಲ್ಲಿ ಸಿಆರ್ಪಿಎಫ್ನವರ ಆಸ್ಪತ್ರೆಯೊಂದನ್ನು ಉದ್ಘಾಟಿಸಿದ ನಂತರ ಶಿಂದೆ ಮಾಧ್ಯಮದವರಲ್ಲಿ ಮಾತನಾಡಿದ್ದಾರೆ.
ಭಾನುವಾರ ಬೆಳಗ್ಗೆ ಬೋಧ್ಗಯಾದಲ್ಲಿನ ವಿಶ್ವಪ್ರಸಿದ್ಧ ಬೌದ್ಧ ದೇಗುಲವಾದ ಮಹಾಬೋಧಿ ದೇವಾಲಯದಲ್ಲಿ 10 ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು.