ಮಹಾಬೋಧಿ ದೇಗುಲಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ ತೆರವು
ಬಿಹಾರದ ಬೋಧ್ಗಯಾದಲ್ಲಿರುವ ಮಹಾಬೋಧಿ ದೇಗುಲ ಸೋಮವಾರ ಸಂಜೆ ವೇಳೆಗೆ ಸಾರ್ವಜನಿಕರಿಗಾಗಿ...
ಬೋಧ್ಗಯಾ: ಬಿಹಾರದ ಬೋಧ್ಗಯಾದಲ್ಲಿರುವ ಮಹಾಬೋಧಿ ದೇಗುಲ ಸೋಮವಾರ ಸಂಜೆ ವೇಳೆಗೆ ಸಾರ್ವಜನಿಕರಿಗಾಗಿ ತೆರೆದುಕೊಳ್ಳಲಿದೆ. ಭಾನುವಾರ ಇಲ್ಲಿ ಸಂಭವಿಸಿದ 9 ಸರಣಿ ಬಾಂಬ್ಸ್ಫೋಟದ ಹಿನ್ನೆಲೆಯಲ್ಲಿ ಪ್ರಸ್ತುತ ದೇಗುಲದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹೇರಿತ್ತು.
ಭಾನುವಾರ ಬಿಹಾರದ ಬೋಧ್ಗಯಾದಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಇಲಾಖೆ ಮತ್ತು ಫಾರೆನ್ಸಿಕ್ ತಜ್ಞರು ತನಿಖೆ ಮುಂದುವರಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ 5 ಸದಸ್ಯರ ತಂಡ ಭಾನುವಾರ ಸಂಜೆ ಮಹಾಬೋಧಿ ದೇಗುಲಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ.
ಸಿಸಿಟಿವಿ ದೃಶ್ಯಾವಳಿ ಬಿಡುಗಡೆ
ಬೋಧ್ಗಯಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಜ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರ ಪ್ರಕಾರ ದೇಗುಲದ ಬಳಿಯಲ್ಲಿ ಮುಂಜಾನೆ ಸುಮಾರು 2-4 ಗಂಟೆಯ ನಡುವೆ ಬಾಂಬ್ ಇರಿಸಲಾಗಿದೆ.
ಆದಾಗ್ಯೂ, ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ರಾಷ್ಟ್ರೀಯ ತನಿಖಾ ದಳ ಆತನನ್ನು ವಿಚಾರಣೆಗೊಳಪಡಿಸಿದೆ.