ಮಹಾಬೋಧಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಶುರು
ಬೋಧ್ಗಯಾದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಇದೀಗ ಸೋಮವಾರ ಸಂಜೆ ವೇಳೆಗೆ ದೇವಾಲಯದಲ್ಲಿ ವಿಶೇಷ ...
ಬೋಧ್ಗಯಾ: ಬೋಧ್ಗಯಾದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಇದೀಗ ಸೋಮವಾರ ಸಂಜೆ ವೇಳೆಗೆ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಆರಂಭವಾಗಿದೆ. ಈಗ ದೇವಾಲಯ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿದ್ದು, ಪ್ರಾರ್ಥನೆ ಮುಂದುವರಿದಿದೆ.
ವಿಶ್ವಪ್ರಸಿದ್ಧ ಮಹಾಬೋಧಿ ದೇವಾಲಯದ ಆವರಣದಲ್ಲಿ ಭಾನುವಾರ 10 ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಇಬ್ಬರಿಗೆ ಗಾಯಗಳಾಗಿದ್ದವು.
ದೇವಾಲಯದ ಆವರಣದಲ್ಲಿ ಒಟ್ಟು 13 ಬಾಂಬ್ಗಳನ್ನಿರಿಸಲಾಗಿದ್ದು, ಅದರಲ್ಲಿ 10 ಬಾಂಬ್ಗಳು ಸ್ಫೋಟಗೊಂಡಿವೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಸೋಮವಾರ ಹೇಳಿದ್ದಾರೆ.
ಆದಾಗ್ಯೂ, ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಯಾ ಜಿಲ್ಲೆಯಿಂದ ಬಿನೋದ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ.