ಆಹಾರ ಭದ್ರತೆ ಕಾಯ್ದೆ: ಕಾಂಗ್ರೆಸ್ ಸಿಎಂರನ್ನು ಭೇಟಿಯಾಗಲಿರುವ ಸೋನಿಯಾ
ನವದೆಹಲಿ: ಯುಪಿಎ ಸರ್ಕಾರದ ಮಹತ್ವಕಾಂಕ್ಷಿಯ ಆಹಾರ ಭದ್ರತೆ ಕಾಯ್ದೆ ಸಂಬಂಧ ಚರ್ಚಿಸಲು ಪ್ರಚಲಿತ ಕಾಂಗ್ರೆಸ್ ಸರ್ಕಾರ ಸ್ಥಾಪಿತ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಪಿಸಿಸಿ ಮುಖ್ಯಸ್ಥರ ಜೊತೆ ಜುಲೈ 13ಕ್ಕೆ ಸೋನಿಯಾ ಗಾಂಧಿ ಸಭೆ ನಡೆಸಲ್ಲಿದ್ದಾರೆ.
ಆಹಾರ ಭದ್ರತೆ ಕಾಯ್ದೆ ಅಂಗೀಕಾರಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಇದರ ನಡುವೆಯೂ ಕಾಂಗ್ರೆಸ್ ಆಹಾರ ಭದ್ರತೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ಅಂಗೀಕಾರ ದೊರೆತ ತತಕ್ಷಣದಿಂದಲೇ ಎಲ್ಲಾ ಕಾಂಗ್ರೆಸ್ ಅಧಿಕಾರ ಸ್ಧಾಪಿತ ರಾಜ್ಯಗಳಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಸಹ ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ವಿತರಿಸುವಂತೆ ಸೂಚಿಸುವ ಸಲುವಾಗಿ ಈ ಸಭೆಯನ್ನು ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಹಾರ ಭದ್ರತೆ ಕಾಯ್ದೆ ಮೂಲಕ ಗ್ರಾಹಕರಿಗೆ ನೇರವಾಗಿ ವರ್ಗಾವಣೆ(ಡಿಬಿಟಿ)ಯೋಜನೆಯನ್ನು ಹೊರತರಲಿದೆ. 2014ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರನ್ನು ಸೆಳೆಯುವ ಕಾರಣದಿಂದಾಗಿ ಕಾಂಗ್ರೆಸ್‌ನ ಯುಪಿಎ ಸರ್ಕಾರ ಈ ಯೋಜನೆಯ ಕಾರ್ಯಕಲ್ಪಕ್ಕೆ ಹಿನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿರುವುದು ಮೆಲ್ನೋಟಕ್ಕೆ ಕಂಡು ಬರುತ್ತಿದೆ.
ಆಹಾರ ಭದ್ರತೆ ಕಾಯ್ದೆ ಮಹತ್ವ ಹಾಗೂ ಅದರ ಪ್ರಯೋಜನಗಳ ಕುರಿತಾಗಿ ನಿನ್ನೆ ಕೇಂದ್ರ ಆಹಾರ ಸಚಿವ ಕೆ.ವಿ. ಆಂಟೋನಿ ಮಾಹಿತಿ ನೀಡಿದ್ದರು. ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಕೇನ್ ಸಹ ಕಾಯ್ದೆಯಿಂದ ದೇಶದ ನಾಗರೀಕರಿಗೆ ಆಗುವ ಪ್ರಯೋಜನಗಳನ್ನು ವಿವರಿಸಿದ್ದರು.