ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್‌ರಿಂದ ಸರ್ಕಾರ ರಚನೆ

Lingaraj Badiger
Updated On : 9 Jul 2013, 4:53 am

ರಾಂಚಿ: 82 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ 42 ಸದಸ್ಯರ ಬೆಂಬಲ ಹೊಂದಿರುವ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನಾಯಕ ಹೇಮಂತ್ ಸೊರೆನ್ ಅವರು ಜಾರ್ಖಂಡ್‌ನಲ್ಲಿ ನೂತನ ಸರ್ಕಾರ ರಚಿಸಲಿದ್ದಾರೆ.

ನೂತನ ಸರ್ಕಾರ ರಚನೆ ಸಂಬಂಧ ಜೆಎಂಎಂ ನಾಯಕ ಹೇಮಂತ್ ಅವರು ಇಂದು ಸಂಜೆ 5ರಿಂದ 6ಗಂಟೆಗೆ ರಾಜ್ಯಪಾಲ ಸಯೀದ್ ಅಹ್ಮದ್ ಅವರ ಭೇಟಿಗೆ ಸಮಯ ಕೋರಿದ್ದು, ರಾಜ್ಯಪಾಲರು 5.30ಕ್ಕೆ ಸಮಯ ನಿಗದಿ ಮಾಡಿದ್ದಾರೆ ಎಂದು ರಾಜಭವನದ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಆರು ತಿಂಗಳ ರಾಷ್ಟ್ರಪತಿ ಆಡಳಿತದ ನಂತರ ಈಗ ಜೆಎಂಎಂ, ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ.

ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಮೈತ್ರಿಕೂಟದ ನೂತನ ಸರ್ಕಾರಕ್ಕೆ ಮೂವರು ಪಕ್ಷೇತರ ಶಾಸಕರಾದ ಬಿದೇಶ್ ಸಿಂಗ್, ಚಮ್ರ ಲಿಂಡ ಮತ್ತು ಹರಿನಾರಾಯಣ ರೈ ಅವರು ಬೆಂಬಲ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಹಾಗೂ ಮತ್ತೊರ್ವ ಪಕ್ಷೇತರ ಅಭ್ಯರ್ಥಿ ಗೀತಾ ಕೋಡಾ ಅವರು ಸಹ ಹೇಮಂತ್ ಸೊರೆನ್‌ಗೆ ಬೆಂಬಲ ಸೂಚಿಸಿದ್ದಾರೆ.

ಜನವರಿ 8ರಂದು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆಎಂಎಂ ಹಿಂಪಡೆದ ನಂತರ ಜನವರಿ 18ರಂದು ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement