ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲಾಲುಗೆ ರಿಲೀಫ್- ಮೇವು ಹಗರಣದ ತೀರ್ಪಿಗೆ ಸುಪ್ರೀಂ ತಡೆ

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಸದ್ಯಕ್ಕೆ ನಿರಾಳವಾಗಿದ್ದಾರೆ. 30 ಕೋಟಿ ರುಪಾಯಿ..

Lingaraj Badiger
Updated On : 9 Jul 2013, 5:31 am

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಸದ್ಯಕ್ಕೆ ನಿರಾಳವಾಗಿದ್ದಾರೆ. 30 ಕೋಟಿ ರುಪಾಯಿ ಮೇವು ಹಗರಣದ ತೀರ್ಪು ಪ್ರಕಟಿಸದಂತೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ವಿಧಿಸಿದೆ.

ಜಾರ್ಖಂಡ್‌ನ ಸಿಬಿಐ ವಿಶೇಷ ಕೋರ್ಟ್ ಜುಲೈ 15ರಂದು ಮೇವು ಹಗರಣದ ತೀರ್ಪು ಪ್ರಕಟಿಸಬೇಕಿತ್ತು. ಆದರೆ ಸಿಬಿಐ ನ್ಯಾಯಾಧೀಶರು ಪಕ್ಷಪಾತ ಮಾಡಿದ್ದು, ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿ ಲಾಲು ಪ್ರಸಾದ್ ಯಾದವ್ ಅವರು ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ್ದರು.

ಲಾಲು ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸದಾಶಿವಂ ಮತ್ತು ನ್ಯಾ.ಜೆ.ಚೆಲಮೇಶ್ವರ್ ಅವರನ್ನೊಳಗೊಂಡ ಸುಪ್ರೀಂ ಪೀಠ, ತೀರ್ಪಿಗೆ ತಡೆ ನೀಡಿದೆ. ಅಲ್ಲದೆ ಲಾಲು ಆರೋಪ ಬಗ್ಗೆ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.

ಈ ಸಂಬಂಧ ಸುಪ್ರೀಂ ಕೋರ್ಟ್ ಸಿಬಿಐ ಹಾಗೂ ಜಾರ್ಖಂಡ್ ಸರ್ಕಾರಕ್ಕೆ ನೋಟಿಸ್ ನೀಡಿದ್ದು, 2 ವಾರದಲ್ಲಿ ಲಾಲು ಅರ್ಜಿಗೆ ಉತ್ತರ ನೀಡುವಂತೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement