ಸಲಿಂಗಕಾಮ: ಮ.ಪ್ರ ಮಾಜಿ ಸಚಿವ ರಾಘವ್‌ಜಿ ಬಂಧನ
ಸಲಿಂಗಕಾಮದ ಆರೋಪದ ಮೇಲೆ ಮಧ್ಯಪ್ರದೇಶ ಮಾಜಿ ವಿತ್ತ ಸಚಿವ ರಾಘವ್‌ಜಿ ಅವರನ್ನು ..
ಭೋಪಾಲ್: ಸಲಿಂಗಕಾಮದ ಆರೋಪದ ಮೇಲೆ ಮಧ್ಯಪ್ರದೇಶ ಮಾಜಿ ವಿತ್ತ ಸಚಿವ ರಾಘವ್‌ಜಿ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದ ರಾಘವ್‌ಜಿ ಅವರನ್ನು ಇಂದು ಭೋಪಾಲ್ ಪೊಲೀಸರು ಅವರ ನಿವಾಸದಲ್ಲಿ ಬಂಧಿಸಿದ್ದಾರೆ.
ಬಂಧನ ಭೀತಿಯಿಂದ ರಾಘವಜಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಆದರೆ ಈಗ ರಾಘವ್‌ಜಿ ಬಂಧನವಾಗಿರುವುದರಿಂದ ನಿರೀಕ್ಷಣಾ ಜಾಮೀನು ಅರ್ಜಿಗೆ ಯಾವುದೇ ಮಹತ್ವ ಇಲ್ಲ.
ರಾಘವ್‌ಜಿ ತನ್ನ ಮೇಲೆ ಹಲವಾರು ವರ್ಷಗಳಿಂದ ವಿಕೃತ ಸಂಭೋಗ ನಡೆಸುತ್ತಿದ್ದರು ಎಂದು ಆರೋಪಿಸಿ ಅವರ ಕೆಲಸಗಾರ ರಾಜ್‌ಕುಮಾರ್ ಕಳೆದ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಈ ಸಂಬಂಧ ರಾಘವ್‌ಜಿ ನಡೆಸಿದ ಅಶ್ಲೀಲ ವರ್ತನೆಯ ಸಿಡಿಯನ್ನು ಸಹ ರಾಜ್‌ಕುಮಾರ್ ಪೊಲೀಸರಿಗೆ ನೀಡಿದ್ದ.
ಸಿಡಿಯಲ್ಲಿ ಸಚಿವರ ಬಣ್ಣ ಬಯಲಾಗುತ್ತಿದ್ದಂತೆ, ಇತ್ತ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂಬ ಒತ್ತಡ ಹೆಚ್ಚಾಯಿತು. ಹೀಗಾಗಿ 79 ವರ್ಷದ ರಾಘವ್‌ಜಿ ಸಚಿವ ಸ್ಥಾನಕ್ಕೆ ಅಂದೇ ರಾಜಿನಾಮೆ ನೀಡಿದ್ದರು.
ಈ ಮಧ್ಯೆ, ರಾಘವ್‌ಜಿ ಅವರನ್ನು ಭಾನುವಾರ ಪಕ್ಷದಿಂದ ಬಿಜೆಪಿ ಉಚ್ಚಾಟಿಸಿದೆ. ಅಲ್ಲದೆ ಪ್ರಕರಣದ ಮುಂದಿನ ಬೆಳಣಿಗೆಗಳನ್ನು ನೋಡಿಕೊಂಡು ಪಕ್ಷದ ಪ್ರಥಾಮಿಕ ಸದಸ್ಯತ್ವದಿಂದಲೂ ಅವರನ್ನು ಉಚ್ಚಾಟಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ನರೇಂದ್ರ ಸಿಂಗ್ ತೊಮರ್ ಅವರು ಹೇಳಿದ್ದಾರೆ.