2ಜಿ ಹಗರಣ; ಮಾರನ್ ವಿರುದ್ಧ ತನಿಖೆ ಪೂರ್ಣ: ಸಿಬಿಐ
ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ಆರೋಪಿ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಹಾಗೂ ಇನ್ನಿತರ ಆರೋಪಿಗಳ ವಿರುದ್ಧದ ತನಿಖೆ ಪೂರ್ಣಗೊಂಡಿದೆ ಎಂದು ಸಿಬಿಐ ಬುಧವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ತನಿಖೆ ಪೂರ್ಣಗೊಂಡ ಹಿನ್ನಲೆಯಲ್ಲಿ ಪ್ರಕರಣದ ಆರೋಪಿಗಳ ವಿರುದ್ಧ ವಿಚಾರಣೆ ನಡೆಸುವುದಕ್ಕೆ ಅನುಮತಿ ನೀಡುವಂತೆ ಕೋರಿ ಕೇಂದ್ರಕ್ಕೆ ಸಿಬಿಐ ಮನವಿ ಮಾಡಲಿದೆ ಎಂದು ನ್ಯಾಯಾಲಯ ಹೇಳಿದೆ.
2ಜಿ ತರಂಗಾಂತರಗಳನ್ನು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿತ್ತು. ಕಾನೂನು ಬಾಹಿರವಾಗಿ 2ಜಿ ತರಂಗಾಂತರ ಹಂಚಿಕೆ ಆರೋಪದಡಿ ಸಿಲುಕಿಹಾಕಿಕೊಂಡಿದ್ದ ದಯಾನಿಧಿ ಮಾರನ್ ಅವರ ವಿರುದ್ಧ ಸಿಬಿಐ ತನ್ನ ತನಿಖೆಯನ್ನು ಪೂರ್ಣಗೊಳಿಸಿರುವುದಾಗಿ ಸುಪ್ರೀಂಕೋರ್ಟ್ಗೆ ತಿಳಿಸಿದೆ.
2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ದಯಾನಿಧಿ ಮಾರನ್ ಭಾಗಿಯಾಗಿರುವುದಾಗಿ ಅವರ ವಿರುದ್ಧ ದಾಖಲಿಸಿದ್ದ (ಎಫ್ಐಆರ್) ಅನ್ನು ಕಳೆದ ಜೂನ್ನಲ್ಲಿ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು.