ಭ್ರಷ್ಟ ಅಧಿಕಾರಿ ರಾಮಚಂದ್ರಪ್ಪಗೆ 7 ವರ್ಷ ಜೈಲು, 2 ಲಕ್ಷ ದಂಡ
8 ಲಕ್ಷ ರುಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಭ್ರಷ್ಟ ಅಧಿಕಾರಿ ರಾಮಚಂದ್ರಪ್ಪಗೆ ಲೋಕಾಯುಕ್ತ ಕೋರ್ಟ್ 7 ವರ್ಷ
ಬೆಂಗಳೂರು: 8 ಲಕ್ಷ ರುಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಭ್ರಷ್ಟ ಅಧಿಕಾರಿ ಕೆ.ರಾಮಚಂದ್ರಪ್ಪಗೆ ಲೋಕಾಯುಕ್ತ ಕೋರ್ಟ್ 7 ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರುಪಾಯಿ ದಂಡ ವಿಧಿಸಿದೆ.
ಉದ್ಯೋಗ ಮತ್ತು ತರಬೇತಿ ಇಲಾಖೆ ಹೆಚ್ಚುವರಿ ನಿರ್ದೇಶಕ ರಾಮಚಂದ್ರಪ್ಪ ಅವರು 2011ರಲ್ಲಿ ರೇವಣ್ಣಗೌಡ ಎಂಬುವವರಿಂದ 8 ಲಕ್ಷ ರುಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್ ಇಂದು ಅಂತಿಮ ತೀರ್ಪು ಪ್ರಕಟಿಸಿದೆ.