ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೋಲಾರ್ ಹಗರಣ; ಶೀಘ್ರದಲ್ಲೇ ಸತ್ಯ ಹೊರಬರಲಿದೆ: ಚಾಂಡಿ

Vishwanath S
Updated On : 10 Jul 2013, 5:12 am

ತಿರುವನಂತಪುರಂ: ಪ್ರತಿಪಕ್ಷಗಳು ಬಲವಂತವಾಗಿ ಸೋಲಾರ್ ಹಗರಣದಲ್ಲಿ ನನ್ನ ಹೆಸರನ್ನು ಎಳೆದು ತರುತ್ತಿವೆ ಎಂದು ಕೇರಳ ಮುಖ್ಯ.ಮಂತ್ರಿ ಉಮ್ಮನ್ ಚಾಂಡಿ ಬುಧವಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಾಂಡಿ, ಸೋಲಾರ್ ಹಗರಣದಲ್ಲಿ ನಾನು ಭಾಗಿಯಾಗಿಲ್ಲ. ಆದರೆ ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಪ್ರಕರಣದಲ್ಲಿ ತಳುಕುಹಾಕಲು ಹವಣಿಸುತ್ತಿವೆ ಎಂದರು. ಅಲ್ಲದೆ ಪ್ರಕರಣದಲ್ಲಿ ಭಾಗಿಯಾಗಿರದ ನನಗೆ ಯಾವುದೇ ಭಯ ಇಲ್ಲ. ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆ ಇದ್ದು, ಶೀಘ್ರದಲ್ಲೇ ಸತ್ಯ ಹೊರ ಬರಲಿದೆ ಎಂದು ತಿಳಿಸಿದರು.

ಒಂದು ವೇಳೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಲು ತಾವು ಸಿದ್ಧ ಎಂದು ಚಾಂಡಿ ಹೇಳಿದ್ದಾರೆ. ಮಾಧ್ಯಮಗಳು ಸಹ ತಮ್ಮ ನಿಕಟವರ್ತಿಗಳ ಸಂಪರ್ಕವಿಟ್ಟುಕೊಂಡಿದ್ದ ಬಂಧಿತ ಆರೋಪಿ ಸರಿತಾ ನಾಯರ್ ಹಾಗೂ ಬಿಜು ರಾಧಾಕೃಷ್ಣ ಅವರೊಂದಿಗೆ ತಾವು ಶಾಮಿಲಾಗಿರುವಂತೆ ಬಿಂಬಿಸುತ್ತಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement