ಜೀವ ಬೆದರಿಕೆ, ರಕ್ಷಣೆ ಕೋರಿದ ಇಶ್ರತ್ ಕುಟುಂಬ
ಇಶ್ರತ್ ಜಾಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಮಗೆ ಜೀವ ಬೆದರಿಕೆ ಕರೆಗಳು...
ಅಹಮಾದಾಬಾದ್: ಇಶ್ರತ್ ಜಾಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಮಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಸೂಕ್ತ ಭದ್ರತೆ ನೀಡುವಂತೆ ಇಶ್ರತ್ ಕುಟುಂಬದವರು ಕೇಂದ್ರ ಗೃಹ ಇಲಾಖೆಗೆ ಗುರುವಾರ ಮನವಿ ಮಾಡಿದ್ದಾರೆ.
ನಾಲ್ಕೈದು ಮಂದಿ ಅಪರಿಚಿತರು ನಮ್ಮ ಮನೆಗೆ ನಗ್ಗಿ ಗಲಾಟೆ ಮಾಡಿದ್ದಾರೆ. ಅಲ್ಲದೆ ದೂರವಾಣಿ ಕರೆ ಮಾಡಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ತಮ್ಮ ಕುಟುಂಬದ ಸದಸ್ಯರಿಗೆ ರಕ್ಷಣೆ ನೀಡುವಂತೆ ಕೋರಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಇಶ್ರತ್ ಕುಟುಂಬವರ್ಗದ ಮನವಿಯನ್ನು ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ, ಕುಟುಂಬವರ್ಗಕ್ಕೆ ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿದೆ.
2004ರಲ್ಲಿ ಇಶ್ರತ್ ಸೇರಿದಂತೆ ಇತರೆ ಮೂವರನ್ನು ಗುಜರಾತ್ ಪೊಲೀಸರು ಉಗ್ರಗಾಮಿಗಳ ಹಣೆ ಪಟ್ಟಿಕಟ್ಟಿ ಎನ್‌ಕೌಂಟರ್ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಇಶ್ರತ್ ಅವರಿಗೆ ಯಾವುದೇ ಉಗ್ರರ ನಟ್ಟು ಇರಲಿಲ್ಲ ಎಂದು ವರದಿ ನೀಡಿತ್ತು. ಅಲ್ಲದೆ ಇದೊಂದು ನಕಲಿ ಎನ್‌ಕೌಂಟರ್ ಎಂದು ದೂರಿದ್ದ ಸಿಬಿಐ, ಈ ಸಂಬಂಧ ಗುಜರಾತ್‌ನ ಆರು ಪೊಲೀಸರ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸಿದೆ.