ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಲಿಂಗಕಾಮ: ರಾಘವ್‌ಜಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಸಲಿಂಗಕಾಮದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮಧ್ಯಪ್ರದೇಶದ ಮಾಜಿ ವಿತ್ತ ಸಚಿವ ರಾಘವ್‌ಜಿ ಸಲ್ಲಿಸಿದ್ದ ನಿರೀಕ್ಷಣಾ...

Vishwanath S
Updated On : 11 Jul 2013, 8:02 am

ಭೋಪಾಲ್: ಸಲಿಂಗಕಾಮದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮಧ್ಯಪ್ರದೇಶದ ಮಾಜಿ ವಿತ್ತ ಸಚಿವ ರಾಘವ್‌ಜಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ತಮ್ಮ ಮನೆ ಕೆಲಸದವನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ  ಸಂಬಂಧ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದ ರಾಘವ್‌ಜಿರನ್ನು ಅವರ ನಿವಾಸದಲ್ಲಿ ಮಂಗಳವಾರ ಭೋಪಾಲ್ ಪೊಲೀಸರು ಬಂಧಿಸಿದ್ದರು.

ರಾಘವ್‌ಜಿ ಅವರನ್ನು ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೇ ಸಂದರ್ಭದಲ್ಲಿ ರಾಘವ್‌ಜಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. 

ರಾಘವ್‌ಜಿ ತನ್ನ ಮೇಲೆ ಹಲವಾರು ವರ್ಷಗಳಿಂದ ವಿಕೃತ ಸಂಭೋಗ ನಡೆಸುತ್ತಿದ್ದರು ಎಂದು ಆರೋಪಿಸಿ ಅವರ ಕೆಲಸಗಾರ ರಾಜ್‌ಕುಮಾರ್ ಕಳೆದ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಈ ಸಂಬಂಧ ರಾಘವ್‌ಜಿ ನಡೆಸಿದ ಅಶ್ಲೀಲ ವರ್ತನೆಯ ಸಿಡಿಯನ್ನು ಸಹ ರಾಜ್‌ಕುಮಾರ್ ಪೊಲೀಸರಿಗೆ ನೀಡಿದ್ದ.

ಸಿಡಿಯಲ್ಲಿ ಸಚಿವರ ಬಣ್ಣ ಬಯಲಾಗುತ್ತಿದ್ದಂತೆ, ಇತ್ತ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂಬ ಒತ್ತಡ ಹೆಚ್ಚಾಯಿತು. ಹೀಗಾಗಿ 79 ವರ್ಷದ ರಾಘವ್‌ಜಿ ಸಚಿವ ಸ್ಥಾನಕ್ಕೆ ಅಂದೇ ರಾಜಿನಾಮೆ ನೀಡಿದ್ದರು.

ಈ ಮಧ್ಯೆ, ರಾಘವ್‌ಜಿ ಅವರನ್ನು ಭಾನುವಾರ ಪಕ್ಷದಿಂದ ಬಿಜೆಪಿ ಉಚ್ಚಾಟಿಸಿದೆ. ಅಲ್ಲದೆ ಪ್ರಕರಣದ ಮುಂದಿನ ಬೆಳಣಿಗೆಗಳನ್ನು ನೋಡಿಕೊಂಡು ಪಕ್ಷದ ಪ್ರಥಾಮಿಕ ಸದಸ್ಯತ್ವದಿಂದಲೂ ಅವರನ್ನು ಉಚ್ಚಾಟಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ನರೇಂದ್ರ ಸಿಂಗ್ ತೊಮರ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement