ಮದ್ಯ ದುಬಾರಿ, ಡೀಸೆಲ್ 50 ಪೈಸೆ ಅಗ್ಗ
ಮದ್ಯಪಾನ ಪ್ರಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಶಾಕ್ ಕೊಟ್ಟಿದ್ದು, ಇನ್ನು ಮುಂದೆ...
ಬೆಂಗಳೂರು: ಮದ್ಯಪಾನ ಪ್ರಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಶಾಕ್ ಕೊಟ್ಟಿದ್ದು, ಇನ್ನು ಮುಂದೆ ಎಣ್ಣೆ ಕುಡಿಯುವವರ ಬಾಯಿ ಸುಡಲಿದೆ.
ಕುಡುಕರ ಜೇಬಿಗೆ ಕತ್ತರಿ ಹಾಕಿರುವ ಸಿದ್ದು, ಮದ್ಯದ ಸ್ಲ್ಯಾಬ್ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.16ರಿಂದ ಶೇ.40ಕ್ಕೆ ಹೆಚ್ಚಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಮದ್ಯದ ದರ ದುಬಾರಿಯಾಗಲಿದೆ.
ಎಸಿ ಚಿತ್ರಮಂದಿರಗಳ ತೆರಿಗೆ ರಹಿತ ಸೇವಾ ಶುಲ್ಕ 1.50ರುಪಾಯಿಂದ 3 ರುಪಾಯಿಗೆ ಏರಿಕೆ ಮತ್ತು ಇತರೆ ಚಿತ್ರಮಂದಿರಗಳ ಸೇವಾ ಶುಲ್ಕ 1 ರು.ನಿಂದ 2 ರುಪಾಯಿಗೆ ಏರಿಕೆ.
ಸಿದ್ದರಾಮಯ್ಯ ಅವರು ಡೀಸೆಲ್ ಮೇಲಿನ ಸೇಸ್ ಅನ್ನು ಶೇ.1.1ರಷ್ಟು ಇಳಿಕೆ ಮಾಡಿದ್ದು, ಇದರಿಂದ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 50 ಪೈಸೆ ಕಡಿಮೆಯಾಗಲಿದೆ. ಇನ್ನು ಸಕ್ಕರೆ ಮೇಲಿನ ಪ್ರವೇಶ ತೆರಿಗೆಯನ್ನು ಶೇ.1ರಷ್ಟು ಇಳಿಸಲಾಗಿದೆ ಮತ್ತು 300 ರುಪಾಯಿ ವರೆಗಿನ ಪಾದರಕ್ಷಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ.