ನಾಪತ್ತೆಯಾಗಿದ್ದ ನಿರ್ಮಾಪಕ ರವಿಶಂಕರ್ ಪ್ರಸಾದ್ ಶವವಾಗಿ ಪತ್ತೆ
ಬೆಂಗಳೂರು: ಕಳೆದ ವಾರ ನಾಪತ್ತೆಯಾಗಿದ್ದ ನಿರ್ಮಾಪಕ ರವಿಶಂಕರ್ ಪ್ರಸಾದ್ ಅವರು ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ.
ಜುಲೈ 8ರಂದು ರವಿಶಂಕರ್ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಆದರೆ ಇಂದು ಆಂಧ್ರಪ್ರದೇಶದ ಯಾಣಂನಲ್ಲಿ ರವಿಶಂಕರ್ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಅವರ ಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ.
ರವಿಶಂಕರ್ ಪ್ರಸಾದ್ ಅವರು ಉಪೇಂದ್ರ ಅಭಿನಯದ ಉಪ್ಪಿ ದಾದಾ ಎಂಬಿಬಿಎಸ್ ಚಿತ್ರದ ನಿರ್ಮಾಪಕರಾಗಿದ್ದರು.