ಬಾಲಿವುಡ್ 'ಪ್ರಾಣ' ಪಂಚಭೂತಗಳಲ್ಲಿ ಲೀನ
ನಿನ್ನೆ ರಾತ್ರಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಬಾಲಿವುಡ್‌ನ ಹಿರಿಯ ನಟ ಪ್ರಾಣ್ ಕಿಶನ್ ಸಿಕಂದ್(93)..
ಮುಂಬೈ: ನಿನ್ನೆ ರಾತ್ರಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಬಾಲಿವುಡ್‌ನ ಹಿರಿಯ ನಟ ಪ್ರಾಣ್ ಕಿಶನ್ ಸಿಕಂದ್(93) ಅವರ ಅಂತ್ಯಕ್ರಿಯೆ ಇಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯಿತು.
ಹಿರಿಯ ನಟ ಪ್ರಾಣ್ ಅವರು ತಮ್ಮ ಪತ್ನಿ ಶುಕ್ಲ, ಪುತ್ರಿ ಪಿಂಕಿ ಹಾಗೂ ಪುತ್ರರಾದ ಅರವಿಂದ್ ಮತ್ತು ಸುನೀಲ್ ಅವರನ್ನು ಅಗಲಿದ್ದಾರೆ.
ಪ್ರಾಣ್ ಅವರ ಅಂತ್ಯಕ್ರಿಯೆಯಲ್ಲಿ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್, ಶತ್ರುಜ್ಞ ಸಿನ್ಹಾ, ಕರಣ್ ಜೋಹರ್ ಸೇರಿದಂತೆ ಹಲವು ನಟ, ನಟಿಯರು ಭಾಗವಹಿಸಿದ್ದರು.
ಹಿಂದಿ ಚಿತ್ರರಂಗದ ಅದ್ಭುತ ಖಳನಾಯಕರಾಗಿದ್ದ ಪ್ರಾಣ್ ಅವರು ತಮ್ಮ ಆರು ದಶಕಗಳ ಚಿತ್ರ ಜೀವನದಲ್ಲಿ ಸುಮಾರು 300ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಒಂದು ಕಾಲದಲ್ಲಿ ಬಾಲಿವುಡ್‌ನ ಪ್ರಾಣವೇ ಆಗಿದ್ದ ನಟ ಪ್ರಾಣ್ ಕಿಶನ್ ಸಿಕಂದ್ ಅವರು ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಬಲ್ಲ ಅದ್ಭುತ ನಟ. ನಾಯಕನಾಗಿ ನಟಿಸಿದರೂ ಪ್ರಾಣ್ ಅವರು ದೇಶಾದ್ಯಂತ ಮನೆಮಾತಾದದ್ದು ಖಳ ಹಾಗೂ ಪೋಷಕ ಪಾತ್ರಗಳಿಗೆ. ಖಳನಾಯಕ, ಗೆಳೆಯ, ಇನ್ಸ್‌ಪೆಕ್ಟರ್, ಅಪ್ಪ, ಸಹೋದರ... ಹೀಗೆ ಪ್ರಾಣ್ ಅವರು ನಿರ್ವಹಿಸದ ಪಾತ್ರಗಳೇ ಇಲ್ಲ. ಬಹುಷಃ ಖಳ ಹಾಗೂ ಉತ್ತಮ ವ್ಯಕ್ತಿಯ ಪಾತ್ರಗಳಲ್ಲಿ ನಟಿಸಿ ಬಾಲಿವುಡ್‌ನಲ್ಲಿ ಸೈ ಅನಿಸಿಕೊಂಡ ನಟನೊಬ್ಬನಿದ್ದರೆ ಅದು ಪ್ರಾಣ್ ಮಾತ್ರ.