ಆರೆಸ್ಸೆಸ್, ವಿಹಿಂಪ, ಬಜರಂಗ ದಳ ನಿಷೇಧಿಸಿ: ಮಾಯಾ
ಅಯೋಧ್ಯೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಬಿಎಸ್ಪಿ ನಾಯಕಿ ಮಾಯಾವತಿ ...
ಲಕ್ನೋ: ಅಯೋಧ್ಯೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಬಿಎಸ್ಪಿ ನಾಯಕಿ ಮಾಯಾವತಿ ದೇಶದಲ್ಲಿ ಜಾತ್ಯಾತೀತತೆ ಕಾಪಾಡಲು ಈ ಪಕ್ಷಗಳ ವಿರುದ್ಧ ನ್ಯಾಯಾಲಯ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಅದೇ ವೇಳೆ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಬಾರೀ ರಾಜಕಾರಣ ಮಾಡುತ್ತಿವೆ. ಮಾತ್ರವಲ್ಲದೆ ಉಭಯ ಪಕ್ಷಗಳ ನಾಯಕರು ಹಿಂದೂ ಮತ್ತು ಮುಸ್ಲಿಂರನ್ನು ಓಲೈಸಲು ಫರೀದಾಬಾದ್ಗೂ ಬಂದಿದ್ದಾರೆ.
ಇಂಥಾ ವಿಷಯಗಳ ದೇಶದ ಜಾತೀಯತೆಯ ಮೇಲೆ ಪ್ರಭಾವ ಬೀರುತ್ತದೆ . ಆದ್ದರಿಂದು ಸುಪ್ರೀಂ ಕೋರ್ಟ್ ಇಂಥಾ ಪಕ್ಷಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಯಾ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಧರ್ಮಕ್ಕೆ ಹೆಚ್ಚಿನ ಬೆಲೆಯಿದೆ. ಅಂಥದರಲ್ಲಿ ಆರೆಸ್ಸೆಸ್ಸ್, ವಿಹಿಂಪ ಮತ್ತು ಬಜರಂಗದಳದಂತಹ ಸಂಘಟನೆಗಳು ತಮ್ಮನ್ನು ಧರ್ಮದೊಂದಿಗೆ ಗುರುತಿಸಿಕೊಳ್ಳುತ್ತಿವೆ. ಆದ್ದರಿಂದ ಸುಪ್ರೀಂ ಕೋರ್ಟ್ ಸಂವಿಧಾನವನ್ನು ಗಣನೆಗೆ ತೆಗೆದುಕೊಂಡು ಈ ಸಂಘಟನೆಗಳಿಗೆ ನಿಷೇಧ ಹೇರಬೇಕೆಂದು ಮಾಯಾ ಒತ್ತಾಯಿಸಿದ್ದಾರೆ.