ಕೂಡಂಕುಳಂನಲ್ಲಿ ವಿದ್ಯುತ್ ಉತ್ಪಾದನೆ ಆರಂಭ
ಭಾರತದ 21ನೇ ಅಣು ವಿದ್ಯುತ್ ಸ್ಥಾವರವಾದ ಕೂಡಂಕುಳಂ ವಿದ್ಯುತ್ ಸ್ಥಾವರದಲ್ಲಿ ಶನಿವಾರ ರಾತ್ರಿ ವಿದ್ಯುತ್ ಉತ್ಪಾದನೆ ಆರಂಭ...
ಚೆನ್ನೈ: ಭಾರತದ 21ನೇ ಅಣು ವಿದ್ಯುತ್ ಸ್ಥಾವರವಾದ ಕೂಡಂಕುಳಂ ವಿದ್ಯುತ್ ಸ್ಥಾವರದಲ್ಲಿ ಶನಿವಾರ ರಾತ್ರಿ ವಿದ್ಯುತ್ ಉತ್ಪಾದನೆ ಆರಂಭಗೊಂಡಿದ್ದು, ಎಲ್ಲ ಪ್ರಕ್ರಿಯೆಗಳು ಸರಾಗವಾಗಿ ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ನಾವು ನಿರೀಕ್ಷಿಸಿದಂತೆ ವಿದ್ಯುತ್ ಸ್ಥಾವರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೂಡಂಕುಳಂ ಅಣು ವಿದ್ಯುತ್ ಸ್ಥಾವರ ಯೋಜನೆ (ಕೆಎನ್ಪಿಪಿ)ಯ ಸೈಟ್ ಡೈರೆಕ್ಟರ್ ಆರ್.ಎಸ್. ಸುಂದರ್ ಹೇಳಿದ್ದಾರೆ.
ಇದೆಲ್ಲವೂ ಚೆನ್ನಾಗಿ ನಡೆದರೆ, ಮುಂದಿನ 30-45 ದಿನಗಳಲ್ಲಿ ನಾವು ದಕ್ಷಿಣ ಗ್ರಿಡ್ಗೆ ಸ್ಥಾವರವನ್ನು ಸಂಪರ್ಕ ಕಲ್ಪಿಸಬಹುದು.
ಪ್ರಸ್ತುತ ಸ್ಥಾವರದಲ್ಲಿ ಶನಿವಾರ ರಾತ್ರಿ 11.05ಕ್ಕೆ ವಿದ್ಯುತ್ ಉತ್ಪಾದನೆ ಶುರುವಾಗಿದೆ. ಎಲ್ಲ ಕಾರ್ಯಗಳು ಇಲ್ಲಿ ಸುಸೂತ್ರವಾಗಿ ನಡೆದು ಬರುತ್ತಿವೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಸುಂದರ್ ಹೇಳಿದ್ದಾರೆ.