ಪೆಟ್ರೋಲ್ ದರ: ಲೀ.ಗೆ 1.55 ಪೈಸೆ ಹೆಚ್ಚಳ
ಪೆಟ್ರೋಲ್ ದರ ಮತ್ತೆ ಏರಿಕೆಯಾಗಿದ್ದು ಭಾನುವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ದರ ಲೀ.ಗೆ 1.55 ಪೈಸೆ ...
ನವದೆಹಲಿ: ಪೆಟ್ರೋಲ್ ದರ ಮತ್ತೆ ಏರಿಕೆಯಾಗಿದ್ದು ಭಾನುವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ದರ ಲೀ.ಗೆ 1.55 ಪೈಸೆ ಹೆಚ್ಚಳವಾಗಲಿದೆ.
ಕಳೆದ ತಿಂಗಳಿನಿಂದ ಇದು ನಾಲ್ಕನೇ ಬಾರಿ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ದರ ಏರಿಕೆ ಮಾಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಬಾರಿ ತೈಲ ಕಂಪನಿಗಳು ಪೆಟ್ರೋಲ್ ಬೆಲೆ 1.82 ಪೈಸೆ ಏರಿಕೆ ಮಾಡಿದ್ದವು.
ಇದೀಗ ಏರಿಕೆ ಮಾಡಿರುವ ದರವು ವಿವಿಧ ನಗರಗಳಲ್ಲಿ ಅಲ್ಲಿನ ಸ್ಥಳೀಯ ತೆರಿಗೆಗೆ ಅನುಗುಣವಾಗಿ ವ್ಯತ್ಯಾಸವಾಗಲಿದೆ.