ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೋಫೋರ್ಸ್ ಹಗರಣಕ್ಕೆ ರಾಜಕೀಯ ಬಣ್ಣ ಯಾಕೆ?

ಕ್ವಟ್ರೋಕಿ ಮತ್ತು ಸೋನಿಯಾ ಇಟೆಲಿಯವರಾಗಿದ್ದರಿಂದಲೇ ಬೋಫೋರ್ಸ್ ಹಗರಣಕ್ಕೆ ರಾಜಕೀಯ ಬಣ್ಣ ನೀಡಲಾಗುತ್ತಿದೆ ಎಂದು...

Rashmi Kasaragodu
Updated On : 14 Jul 2013, 4:02 am

ನವದೆಹಲಿ: ಕ್ವಟ್ರೋಕಿ ಮತ್ತು ಸೋನಿಯಾ ಇಟೆಲಿಯವರಾಗಿದ್ದರಿಂದಲೇ ಬೋಫೋರ್ಸ್ ಹಗರಣಕ್ಕೆ ರಾಜಕೀಯ ಬಣ್ಣ ನೀಡಲಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಣಾಕಾರರೊಬ್ಬರು ಹೇಳಿದ್ದಾರೆ.

ಬೋಫೋರ್ಸ್ ಹಗರಣದ ಸೂತ್ರಧಾರ ಒಟ್ಟಾವಿಟೋ ಕ್ವಟ್ರೋಕಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಟೆಲಿ ಮೂಲದವರಾಗಿದ್ದರಿಂದಲೇ ಬೋಫೋರ್ಸ್ ಹಗರಣಕ್ಕೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಣಾಕಾರ ಫ್ರೊ. ತುಲಸೀ ರಾಮ್ ಹೇಳಿದ್ದಾರೆ.

ಮೂರು ದಶಕಗಳ ಹಿಂದೆಯೇ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಯಾವುದೇ ತನಿಖಾ ಸಂಸ್ಥೆಗೆ ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯವನ್ನು ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಈ ಪ್ರಕರಣವನ್ನು ಕೈ ಬಿಟ್ಟಿತ್ತು ಎಂದು ರಾಮ್ ಹೇಳಿದ್ದಾರೆ.

ಏತನ್ಮಧ್ಯೆ, ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಈ ಪ್ರಕರಣವನ್ನು ಮತ್ತೆ ಪ್ರಸ್ತಾಪಿಸುವ ಸಾಧ್ಯತೆ ಇದೆ ಎಂದು ರಾಮ್ ಹೇಳಿದ್ದಾರೆ.
 
ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಇನ್ನಿತರ ಸಮಸ್ಯೆಗಳ ಜತೆಗೆ ಈ ಪ್ರಕರಣವನ್ನೂ ಎತ್ತಿ ಹಿಡಿಯಲಿದ್ದಾರೆ. ಇದೊಂದು ರಾಜಕೀಯ ಸಮಸ್ಯೆ. ಆದರೆ ಇದರ ಆರೋಪಿಗಳ ಬಗ್ಗೆ ಯಾವುದೇ ಸಾಕ್ಷ್ಯಗಳು ಈವರೆಗೆ ಸಿಕ್ಕಿಲ್ಲ ಎಂದು ರಾಮ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement