ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ

ಗುಜರಾತ್ ಸಿಎಂ ಮೋದಿ ಅವರು ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾಡಿದ ನಾಯಿಮರಿ ಪ್ರಸ್ತಾಪದ ಬಗ್ಗೆ ಇತರ ಪಕ್ಷಗಳು...

Rashmi Kasaragodu
Updated On : 14 Jul 2013, 1:42 am

ನವದೆಹಲಿ: ಗುಜರಾತ್ ಸಿಎಂ ಮೋದಿ ಅವರು ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾಡಿದ ನಾಯಿಮರಿ ಪ್ರಸ್ತಾಪದ ಬಗ್ಗೆ ಇತರ ಪಕ್ಷಗಳು ಟೀಕಾಪ್ರಹಾರ ನಡೆಸಿದರೆ ಮೋದಿ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಮೋದಿಯವರ ನಾಯಿಮರಿ ಪ್ರಸ್ತಾಪ ಅವರ ಮಕ್ಕಳಂತಿರುವ ಮುಗ್ಧಮನಸ್ಸನ್ನು ಬಿಂಬಿಸುತ್ತಿದೆ ಎಂದು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.

ಮೋದಿ ಸಹಾನುಭೂತಿಯ ಬಗ್ಗೆ ಮಾತನಾಡಿದ್ದಾರೆ. ಒಂದು ನಾಯಿಮರಿ ಕಾರಿನಡಿಗೆ ಸಿಕ್ಕಿದರೆ ಒಂದು ಮಗು ಏನು ಯೋಚನೆ ಮಾಡುತ್ತದೆಯೋ ಅದೇ ಅರ್ಥದಲ್ಲಿ ಮೋದಿ ಆ ಹೇಳಿಕೆಯನ್ನು ನೀಡಿದ್ದಾರೆ. ಅವರ ಈ ಸಹಾನುಭೂತಿಯ ಮಾತುಗಳು ಮಗುವಿನಂತಿರುವ ಅವರ ಹೃದಯವನ್ನು ತೋರಿಸುತ್ತದೆ ಎಂದು ರೂಡಿ ಹೇಳಿದ್ದಾರೆ.

ಅದೇ ವೇಳೆ ಕಾಂಗ್ರೆಸ್ ಮೋದಿ ಹೇಳಿಕೆಯನ್ನು ತಿರುಚಿ ವಿವಾದವನ್ನುಂಟು ಮಾಡುತ್ತಿದೆ ಎಂದು ಬಿಜೆಪಿ ದೂರಿದೆ.

ಆದಾಗ್ಯೂ, ಮೋದಿಯವರು ಹೇಳಿದ ಹೇಳಿಕೆಯನ್ನೆಲ್ಲಾ ತಿರುಚಿ ಅರ್ಥೈಸುವುದು ಕಾಂಗ್ರೆಸ್ ಜಾಯಮಾನ. ಕಾಂಗ್ರೆಸ್‌ನವರಿಗೆ ಮೋದಿಯ ಜನಪ್ರಿಯತೆಯನ್ನು ಕಡಿಮೆಗೊಳಿಸಿ, ಸಾಮರಸ್ಯಕ್ಕೆ ಧಕ್ಕೆ ತರುವುದೇ ಅಭ್ಯಾಸವಾಗಿಬಿಟ್ಟಿದೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement