ಉತ್ತರಾಖಂಡ್ ಪ್ರವಾಹಕ್ಕೆ 6 ಸಾವಿರ ಬಲಿ
ಉತ್ತರಾಖಂಡ್ದ ಮಹಾ ಪ್ರವಾಹಕ್ಕೆ ಬಲಿಯಾದವರು ಸಂಖ್ಯೆ ಬರೋಬ್ಬರಿ 6 ಸಾವಿರ ಎಂದು ಉತ್ತರಾಖಂಡ್..
ನವದೆಹಲಿ: ಉತ್ತರಾಖಂಡ್ದ ಮಹಾ ಪ್ರವಾಹಕ್ಕೆ ಬಲಿಯಾದವರು ಸಂಖ್ಯೆ ಬರೋಬ್ಬರಿ 6 ಸಾವಿರ ಎಂದು ಉತ್ತರಾಖಂಡ್ ಸರ್ಕಾರ ಸೋಮವಾರ ಅಧಿಕೃತವಾಗಿ ಘೋಷಿಸಿದೆ.
ಪ್ರವಾಹದಲ್ಲಿ ಸಿಲುಕು ನಾಪತ್ತೆಯಾದವರನ್ನು ಸಹ ಸರ್ಕಾರ ಮೃತಪಟ್ಟವರ ಪಟ್ಟಿಗೆ ಸೇರಿಸಿದ್ದು, ಅವರ ಕುಟುಂಬಗಳಿಗೂ ಉತ್ತರಾಖಂಡ್ ಸರ್ಕಾರ ಪರಿಹಾರ ನೀಡುವುದಾಗಿ ಹೇಳಿದೆ. ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರುಪಾಯಿ ಸೇರಿದಂತೆ ತಲಾ 5 ಲಕ್ಷ ರುಪಾಯಿ ಹಾಗೂ ಕೆಲಸದ ಮೇಲೆ ಇದ್ದಾಗ ಮೃತಪಟ್ಟ ಸರ್ಕಾರಿ ನೌಕರರಿಗೆ ತಲಾ 10 ಲಕ್ಷ ರುಪಾಯಿ ಪರಿಹಾರ ನೀಡಲಾಗುವುದು ಎಂದು ಉತ್ತರಾಖಂಡ್ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ 1 ಸಾವಿರ ಯಾತ್ರಿಗಳು ಸೇರಿದಂತೆ ದೇಶದ ಒಟ್ಟು 18 ರಾಜ್ಯಗಳ ಯಾತ್ರಾರ್ಥಿಗಳು ಪ್ರವಾಹದಲ್ಲಿ ದುರ್ಮರಣ ಹೊಂದಿದ್ದಾರೆ ಎಂದು ಸರ್ಕಾರ ಹೇಳಿದೆ.
ಕೇದಾರನಾಥ-ರಾಂಬರ ಹಾಗೂ ಗೌರೀಕುಂಡ್ನಲ್ಲಿ ಅತೀ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ನಾಪತ್ತೆಯಾಗಿದ್ದಾರೆ. ಸುದೀರ್ಘ 17 ದಿನಗಳ ಕಾಲ ಸಮರೋಪಾದಿಯಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು 1.1ಲಕ್ಷ ಮಂದಿಯನ್ನು ರಕ್ಷಿಸಲಾಗಿದೆ.