ಕೋಮುವಾದಕ್ಕಿಂತ ಬುರ್ಖಾ ಜಾತೀಯತೆ ಉತ್ತಮ: ಕಾಂಗ್ರೆಸ್
ಕಾಂಗ್ರೆಸ್ ಬುರ್ಖಾ ಜಾತೀಯತೆ ರಾಜಕಾರಣ ನಡೆಸುತ್ತಿದೆ ಎಂದು ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್...
ನವದೆಹಲಿ: ಕಾಂಗ್ರೆಸ್ ಬುರ್ಖಾ ಜಾತೀಯತೆ ರಾಜಕಾರಣ ನಡೆಸುತ್ತಿದೆ ಎಂದು ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಕೋಮುವಾದಕ್ಕಿಂತ ಬುರ್ಖಾ ಜಾತೀಯತೆ ಉತ್ತಮ ಎಂದು ಹೇಳಿದೆ.
ಮೋದಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಅಜಯ್ ಮೆಕೇನ್, ಜಾತಿ ಹೆಸರಲ್ಲಿ ಸಮುದಾಯಗಳನ್ನು ಒಡೆದು ಆಳುವ ಕೆಲಸಕ್ಕಿಂತ ಕಾಂಗ್ರೆಸ್ನ ಬುರ್ಖಾ ಜಾತೀಯತೆ ಹೆಚ್ಚು ಮೌಲ್ಯವರ್ಧಿತವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಅಧಿಕಾರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಈ ಆರೋಪಗಳಲ್ಲಿ ಹುರುಳಿಲ್ಲ. ಅಲ್ಲದೆ 2014ರ ಬಿಜೆಪಿಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೋದಿ ಗುಜರಾತ್ನ ಅಭಿವೃದ್ಧಿಯನ್ನು ಮುಖ್ಯವಾಗಿ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಬಿಜೆಪಿಯ ಚುನಾವಣಾ ಸಮಿತಿಯ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಪಕ್ಷದಲ್ಲಿ ಉದ್ಭವಿಸಿದ್ದ ಆಂತರಿಕ ಬಿಕ್ಕಟ್ಟನ್ನು ಅವರು ಮರೆತಂತಿದೆ.
ಯಾರೇ ಆಗಲಿ ತನ್ನ ರಾಜ್ಯದ ಜನರನ್ನು ಸುರಕ್ಷಿತವಾಗಿ ಆಳಲು ಸಾಧ್ಯವಾಗದ್ದಿದ್ದಾಗ ಇಡೀ ದೇಶದ ಜನರನ್ನು ಆಳಲು ಸಾಧ್ಯವಾಗುತ್ತದೆಯೇ? ಎಂದು ಮೆಕೇನ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ಅಧಿಕಾರಾವಧಿಯಲ್ಲಿ ದೇಶದ ಸ್ಥಿತಿ ಅಧೋಗತಿಗಿಳಿದಿದ್ದು, ಆಂತರಿಕ ಬಿಕ್ಕಟ್ಟು ಎದುರಿಸುವ ಸಾಮರ್ಥ್ಯವೇ ಕಾಂಗ್ರೆಸ್ ಇಲ್ಲ. ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಜಾತ್ಯತೀತವಾದದ ಮುಸುಕು ಹೊದ್ದುಕೊಂಡು ತಲೆಮರೆಸಿಕೊಳ್ಳುತ್ತಿದೆ. ಸದ್ಯ ರಾಷ್ಟ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ ಎಂದು ಮೋದಿ ಆರೋಪಿಸಿದ್ದರು.