ಮೋದಿ 'ದರ್ಶನ'ಕ್ಕೆ 5 ರು. ಶುಲ್ಕ!
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ...
ಹೈದರಾಬಾದ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಮುಂದಿನ ತಿಂಗಳು ಹೈದರಾಬಾದ್ನಲ್ಲಿ ನಡೆಯುವ 'ಹಿಂದುತ್ವ' ರ್ಯಾಲಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕಾರ್ಯಕರ್ತನ ಬಳಿ 5 ರೂಪಾಯಿಯನ್ನು ದೇಣಿಗೆಯಾಗಿ ಸಂಗ್ರಹಿಸಲು ಪಕ್ಷ ತೀರ್ಮಾನಿಸಿದೆ.
ಹೈದರಾಬಾದ್ನಲ್ಲಿ ನಡೆಯುವ ರ್ಯಾಲಿ ಸಂದರ್ಭದಲ್ಲಿ, ಸಂಗ್ರಹಿಸಲಾಗುವ ಹಣವನ್ನು ಉತ್ತರಾಖಂಡದ ಜಲಪ್ರಳಯದಲ್ಲಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡಿರುವವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಕ್ಕೆ ಬಳಸಲಾಗುವುದು ಎಂದು ಬಿಜೆಪಿ ವಕ್ತಾರ ಎನ್. ರಾಮಚಂದ್ರನ್ ರಾವ್ ಹೇಳಿದ್ದಾರೆ.
ಮೋದಿ ಅವರಿಗೆ ಅಪಾರ ಜನ ಬೆಂಬಲ ಇರುವುದರಿಂದ ಸ್ವತಃ ಕಾರ್ಯಕರ್ತರೇ ಪ್ರವೇಶ ಶುಲ್ಕ ನೀಡಲು ಸಿದ್ಧರಾಗಿದ್ದಾರೆ. ಆದರೆ ಇದನ್ನೆ ಅಸ್ತ್ರವಾಗಿರಿಸಿಕೊಂಡಿರುವ ಇತರೆ ರಾಜಕೀಯ ಪಕ್ಷಗಳು ನಮ್ಮ ಕಾರ್ಯವನ್ನು ಟೀಕಿಸಲು ಹವಣಿಸುತ್ತಿವೆ ಎಂದು ಹೇಳಿದ್ದಾರೆ.
ರ್ಯಾಲಿಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಕಾರ್ಯಕರ್ತರು ಆನ್ಲೈನ್ ಮುಖಾಂತರ ಸಹ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ರಾಮಚಂದ್ರನ್ ಹೇಳಿದ್ದಾರೆ.