ವಾಯುಪಡೆ ವಿಮಾನ ಪತನ: ಪೈಲಟ್ ಸಾವು
ಭಾರತೀಯ ವಾಯುಪಡೆಯ ವಿಮಾನವೊಂದು ಸೋಮವಾರ ಪತನವಾಗಿದ್ದು, ದುರ್ಘಟನೆಯಲ್ಲಿ ತರಬೇತಿ ನಿರತ ಪೈಲಟ್..
ಜೈಪುರ: ಭಾರತೀಯ ವಾಯುಪಡೆಯ ವಿಮಾನವೊಂದು ಸೋಮವಾರ ಪತನವಾಗಿದ್ದು, ದುರ್ಘಟನೆಯಲ್ಲಿ ತರಬೇತಿ ನಿರತ ಪೈಲಟ್ ಮೃತಪಟ್ಟಿದ್ದಾರೆ.
ತರಬೇತಿ ವೇಳೆ ಇಂದು ಬೆಳಗ್ಗೆ 9.30ರ ಸುಮಾರಿಗೆ ರಾಜಸ್ಥಾನದ ಉತ್ತರಲೈ ಬಳಿ ಭಾರತೀಯ ವಾಯುಪಡೆಗೆ ಸೇರಿದ ಎಂಐಜಿ-21 ಯುದ್ಧ ವಿಮಾನ ಪತನವಾಗಿದೆ ಎಂದು ರಕ್ಷಣಾ ವಕ್ತಾರ ಎಸ್.ಡಿ.ಗೋಸ್ವಾಮಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ವಿಮಾನ ಪತನಕ್ಕೆ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ ಘಟನೆಯ ಕುರಿತು ತನಿಖೆಗೆ ಆದೇಶಿಸಿಲಾಗಿದೆ ಎಂದು ಗೋಸ್ವಾಮಿ ಅವರು ಹೇಳಿದ್ದಾರೆ.