ಹವಾಲ ಹಣ ವರ್ಗಾವಣೆ: 22 ಬ್ಯಾಂಕ್ಗಳಿಗೆ ಆರ್ಬಿಐ ದಂಡ
ಕಾನೂನು ಬಾಹಿರವಾಗಿ ಹವಾಲ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ..
ನವದೆಹಲಿ: ಕಾನೂನು ಬಾಹಿರವಾಗಿ ಹವಾಲ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 22 ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಆರ್ಬಿಐ ಸೋಮವಾರ 49.5 ಕೋಟಿ ರು. ಭಾರಿ ಮೊತ್ತದ ದಂಡವನ್ನು ವಿಧಿಸಿದೆ.
ರಾಷ್ಟ್ರೀಕೃತ ಬ್ಯಾಂಕ್ಗಳಾದ ಎಸ್ಬಿಐ, ಯಸ್ ಬ್ಯಾಂಕ್, ಕೊಲ್ಕತ್ತಾ ಮಹೀಂದ್ರ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸಿಟಿ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್ಗಳಿಗೆ ದಂಡ ವಿಧಿಸಲಾಗಿದೆ. ಅಲ್ಲದೆ ಇನ್ನೂ ಮುಂದೆ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವಂತೆಯೂ ಆರ್ಬಿಐ ಸೂಚಿಸಿದೆ.
ಎಸ್ಬಿಐ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯಾ ಒವೇರ್ಸೀಸ್ ಬ್ಯಾಂಕ್ ಹಾಗೂ ಫೆಡರಲ್ ಬ್ಯಾಂಕ್ಗೆ ತಲಾ 3 ಕೋಟಿ ರು. ದಂಡ ವಿಧಿಸಿದೆ.
ಯುನಟೆಡ್ ಬ್ಯಾಂಕ್ ಆಫ್ ಇಂಡಿಯಾ, ಲಕ್ಷ್ಮೀ ವಿಲಾಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಕಾಶ್ಮೀರ್ ಬ್ಯಾಂಕ್ ಹಾಗೂ ಆಂಧ್ರ ಬ್ಯಾಂಕ್ಗಳಿಗೆ ಆರ್ಬಿಐ ತಲಾ 2.5 ಕೋಟಿ ರು. ದಂಡ ವಿಧಿಸಿದೆ.