ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾರ್‌ನಲ್ಲಿ ಬಾಲೆಯರ ನೃತ್ಯಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್

ಬಾಂಬೆ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ..

Lingaraj Badiger
Updated On : 16 Jul 2013, 1:32 am

ನವದೆಹಲಿ: ಬಾಂಬೆ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಡ್ಯಾನ್ಸ್ ಬಾರ್‌ಗಳನ್ನು ಪುನಾ ಆರಂಭಿಸಲು ಮಂಗಳವಾರ ಅನುಮತಿ ನೀಡಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬಿರ್ ಹಾಗೂ ನ್ಯಾಯಮೂರ್ತಿ ಎಸ್.ಎಸ್. ನಿಜ್ಜರ್ ಅವರನ್ನೊಳಗೊಂಡ ಸುಪ್ರೀಂ ಪ್ರೀಠ, ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲು ತಾನು ನೀಡಿದ್ದ ತಡೆಯಾಜ್ಞೆಯನ್ನು ಇಂದು ತೆರವುಗೊಳಿಸಿತು.

ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಕಳೆದ 7 ವರ್ಷಗಳಿಂದ ನಿಷೇಧಕ್ಕೊಳಗಾಗಿದ್ದ ಬಾರ್ ಡ್ಯಾನ್ಸ್‌ರಗಳ ನೃತ್ಯಕ್ಕೆ ಮತ್ತೆ ಚಾಲನೆ ಸಿಕ್ಕಂತಾಗಿದೆ. 2005ರಲ್ಲಿ ಮುಂಬೈ ಪೊಲೀಸರು ರಾಜ್ಯಾದ್ಯಂತ ಬಾರ್‌ಗಳಲ್ಲಿನ ಬಾಲೆಯರ ನೃತ್ಯಕ್ಕೆ ನಿಷೇಧ ಹೇರಿದ್ದರು. ಹೀಗಾಗಿ ಡ್ಯಾನ್ಸ್ ಬಾರ್‌ಗಳನ್ನು ಮುಚ್ಚಲಾಗಿತ್ತು.

ಸ್ಟಾರ್ ಹೋಟೆಲ್‌ಗಳು ಸೇರಿದಂತೆ ಇತರೆ ಡ್ಯಾನ್ಸ್ ಬಾರ್‌ಗಳಲ್ಲಿನ ನೃತ್ಯಕ್ಕೆ ಮುಂಬೈ ಪೊಲೀಸರು ಅನುಮತಿ ನೀಡಿರಲಿಲ್ಲ. ಇದರಿಂದ ಮುಂಬೈಯೊಂದರಲ್ಲೇ ಸುಮಾರು 70 ಸಾವಿರ ಮಂದಿ ಬಾರ್ ಡ್ಯಾನ್ಸರ್‌ಗಳು ಉದ್ಯೋಗವಿಲ್ಲದೆ ನಿತ್ಯ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಹೀಗಾಗಿ ಅವರು ನಿಷೇಧವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಡ್ಯಾನ್ಸ್ ಬಾರ್‌ಗಳಲ್ಲಿ ನರ್ತಿಕಿಯರ ಮೈಮಾಟ ಪ್ರದರ್ಶನ, ಅಶ್ಲೀಲ ನೃತ್ಯ ನಡೆಯುತ್ತಿದ್ದು, ಇದು ಮಾನವ ಕಳ್ಳ ಸಾಗಣೆ ಹಾಗೂ ಮಹಿಳಾ ಶೋಷಣೆಗೆ ದಾರಿ ಮಾಡಿಕೊಡಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ನಲ್ಲಿ ವಾದಿಸಿತ್ತು. ಆದರೆ ಸರ್ಕಾರದ ವಾದವನ್ನು ತಳ್ಳಿಹಾಕಿದ್ದ ಹೈಕೋರ್ಟ್ ಡ್ಯಾನ್ಸ್ ಬಾರ್‌ಗೆ ಅವಕಾಶ ಮಾಡಿಕೊಟ್ಟಿತ್ತು. ಡ್ಯಾನ್ಸ್ ಬಾರ್ ನರ್ತಿಕಿಯರಿಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ನೆರವು ನೀಡದಿರುವುದರಿಂದ ಅವರಿಗೆ ನರ್ತಿಸಲು ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement