ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೋಧಗಯಾ ಸ್ಫೋಟದ ಸುಳಿವು ಸಿಕ್ಕಿದೆ: ಶಿಂಧೆ

Vishwanath S
Updated On : 17 Jul 2013, 7:47 am

ಅಲ್ವಾರ್: ಬೋಧಗಯಾ ಸರಣಿ ಸ್ಫೋಟ ಪ್ರಕರಣದ ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಮುಖ ಸುಳಿವುಗಳನ್ನು ಪತ್ತೆ ಹಚ್ಚಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಬುಧವಾರ ಹೇಳಿದ್ದಾರೆ.

ಇಂದು ಬಹದೂರ್‌ನಲ್ಲಿ ಮಹಿಳಾ ಸಿಆರ್‌ಪಿಸಿ ಬೆಟಾಲಿಯನ್ ಬೇಸ್‌ಗೆ ಶಂಕು ಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಐಎ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಮುಖ ಸುಳಿವುಗಳನ್ನು ಪತ್ತೆ ಹಚ್ಚಿದೆ ಎಂದರು.

ಎನ್‌ಐಎಗೆ ಸಿಕ್ಕಿರುವ ಸುಳಿವುಗಳನ್ನು ಸದ್ಯಕ್ಕೆ ಗುಪ್ತವಾಗಿರಿಸಲಾಗಿದೆ. ಸ್ಫೋಟದ ಮುಂದಿನ ತನಿಖೆಗೆ ತೊಂದರೆಯಾಗುವ ಸಾಧ್ಯತೆಗಳಿರುವುರಿಂದ ಮಾಹಿತಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಶಿಂಧೆ ತಿಳಿಸಿದ್ದಾರೆ.

ದಾಳಿಗೆ ಸಂಬಂಧಿಸಿದಂತೆ, ತನಿಖೆಗೆ ಪೂರಕವಾದ ಮಾಹಿತಿಗಳು ಸಿಗದಿದ್ದರಿಂದ ತನಿಖೆಗೆ ಅಡ್ಡಿಯಾಗಿತ್ತು. ಇದೀಗ ದೊರಕಿರುವ ಸುಳಿವಿನ ಬೆನ್ನ ಹತ್ತಿ ಸ್ಫೋಟದ ಕುರಿತಾದ ಕಾರಣಗಳನ್ನು ಶೀಘ್ರದಲ್ಲೇ ಎನ್‌ಐಎ ಬಯಲಿಗೆಳೆಯಲಿದೆ ಎಂದು ಶಿಂಧೆ ಹೇಳಿದ್ದಾರೆ.

ಬೋಧಗಯಾದಲ್ಲಿರು ಪ್ರಸಿದ್ಧ ಬುದ್ಧನ ದೇವಾಲಯದ ಮೇಲೆ ಜುಲೈ 7 ರಂದು ಉಗ್ರರು ಸರಣಿ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಗಂಭೀರವಾಗಿ ಗಾಯಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement