ವಿಧಾನಸಭೆ ಉಪಾಧ್ಯಕ್ಷರಾಗಿ ಶಿವಶಂಕರ್ ರೆಡ್ಡಿ ಅವಿರೋಧ ಆಯ್ಕೆ
ವಿಧಾನಸಭೆ ಉಪಾಧ್ಯಕ್ಷರಾಗಿ ಗೌರಿಬಿದನೂರು ಕಾಂಗ್ರೆಸ್ ಶಾಸಕ ಶಿವಶಂಕರ್ ರೆಡ್ಡಿ ಅವಿರೋಧ ಆಯ್ಯೆಯಾಗಿದ್ದಾರೆ.
ಬೆಂಗಳೂರು: ವಿಧಾನಸಭೆ ಉಪಾಧ್ಯಕ್ಷರಾಗಿ ಗೌರಿಬಿದನೂರು ಕಾಂಗ್ರೆಸ್ ಶಾಸಕ ಶಿವಶಂಕರ್ ರೆಡ್ಡಿ ಅವರು ಬುಧವಾರ ಅವಿರೋಧ ಆಯ್ಯೆಯಾಗಿದ್ದಾರೆ.
ವಿಧಾನಸಭೆ ಉಪಾಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿತ್ತು. ಆದರೆ ಕೊನೆ ಕ್ಷಣದವರೆಗೂ ಪ್ರತಿಪಕ್ಷಗಳ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದಿರುವುದರಿಂದ ಶಿವಶಂಕರ್ ರೆಡ್ಡಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಪ್ರಕಟಿಸಿದ್ದಾರೆ.