ಆಸಿಡ್ ದಾಳಿಯಿಂದ ಮೃತಪಟ್ಟರೆ, 3 ಲಕ್ಷ ಪರಿಹಾರ ನೀಡಿ: ಸುಪ್ರೀಂ
ಆಸಿಡ್ ದಾಳಿಗೆ ಸಂಬಂಧಿಸಿದಂತೆ ಗುರುವಾರ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಆಸಿಡ್ ದಾಳಿಗೆ ..
ನವದೆಹಲಿ: ಆಸಿಡ್ ದಾಳಿಗೆ ಸಂಬಂಧಿಸಿದಂತೆ ಗುರುವಾರ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಆಸಿಡ್ ದಾಳಿಗೆ ಒಳಗಾಗಿ ಮೃತಪಡುವ ವ್ಯಕ್ತಿಗೆ ಮೂರು ಲಕ್ಷ ರುಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಆಸಿಡ್ ದಾಳಿಗೆ ಒಳಗಾದ ವ್ಯಕ್ತಿಯ ವೈದ್ಯಕೀಯ ವೆಚ್ಚವನ್ನು ಸಹ ಸರ್ಕಾರವೇ ಭರಿಸಬೇಕು ಎಂದು ಆದೇಶಿಸಿರುವ ಕೋರ್ಟ್, ಆಸಿಡ್ ಮರಾಟಕ್ಕೂ ಕೆಲವು ನಿರ್ಬಂಧ ಹೇರಿದೆ.
ದಾಖಲೆ ಇಲ್ಲದೆ ಯಾವುದೇ ವ್ಯಾಪಾರಿಯೂ ಆಸಿಡ್ ಮಾರುವಂತಿಲ್ಲ ಮತ್ತು ಒಂದು ವೇಳೆ ದಾಖಲೆ ಇಲ್ಲದೆಯೂ ಆಸಿಡ್ ಮಾರಾಟ ಮಾಡಿದರೇ, ಆ ವ್ಯಾಪಾರಿಯನ್ನೇ ಅಪರಾಧಿ ಎಂದು ಪರಿಗಣಿಸಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ. ಅಲ್ಲದೆ 18 ವರ್ಷದೊಳಗಿನವರಿಗೆ ಆಸಿಡ್ ಮಾರುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ. ಇನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಬಲ್ಕ್ಲ್ಲಿ ಆಸಿಡ್ ಖರೀದಿ ಮಾಡಬೇಕಾದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಪರವಾನಿಗೆ ಪಡೆಯೂವಂತೆ ಸೂಚಿಸಿದೆ.
ಪಾಯ್ಸನ್ ಆಕ್ಟ್ ಪ್ರಕಾರ ಆಸಿಡ್ ದಾಳಿಗೆ ಒಳಗಾಗಿ ಮೃತಪಡು ವ್ಯಕ್ತಿ ಮೂರು ಲಕ್ಷ ರುಪಾಯಿ ಪರಿಹಾರ ನೀಡಬೇಕು. 15 ದಿನದೊಳಗಾಗಿ 1 ಲಕ್ಷ ಹಾಗೂ ಇನ್ನುಳಿದ 2 ಲಕ್ಷ ರುಪಾಯಿ ಪರಿಹಾರವನ್ನು ಎರಡು ತಿಂಗಳೊಳಗಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ಲದೆ ಆಸಿಡ್ ದಾಳಿ ಪ್ರಕರಣಗಳನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.