ಬಿಸಿಯೂಟ: ತ.ನಾಡಿನಲ್ಲಿ 100 ಬಾಲಕಿಯರು ಅಸ್ವಸ್ಥ
23 ವಿದ್ಯಾರ್ಥಿಗಳನ್ನು ಬಲಿ ಪಡೆದ ಬಿಹಾರದ ಬಿಸಿಯೂಟ ದುರಂತದ ಬೆನ್ನಲ್ಲೆ, ತಮಿಳುನಾಡಿನಲ್ಲಿ ಗುರುವಾರ ..
ನೆಯ್ವೆಲ್ಲಿ: 23 ವಿದ್ಯಾರ್ಥಿಗಳನ್ನು ಬಲಿ ಪಡೆದ ಬಿಹಾರದ ಬಿಸಿಯೂಟ ದುರಂತದ ಬೆನ್ನಲ್ಲೆ, ತಮಿಳುನಾಡಿನಲ್ಲಿ ಗುರುವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 100ಕ್ಕು ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಆಸ್ಪತ್ರೆ ಸೇರಿದ್ದಾರೆ.
ನೆಯ್ವೆಲ್ಲಿ ಜಿಲ್ಲೆಯ ಶಾಲೆಯೊಂದರಲ್ಲಿ ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸಿದ ಸುಮಾರು 100 ಬಾಲಿಕಿಯರು ಅಸ್ವಸ್ಥಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಎಲ್ಲ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲುಷಿತ ಆಹಾರ ಸೇವನೆಯಿಂದ ಈ ಎಲ್ಲ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಹಾರದ ಸಾರನ್ ಜಿಲ್ಲೆಯ ಛಾಪ್ರಾದಲ್ಲಿ ಮಂಗಳವಾರ ಸಂಭವಿಸಿದ್ದ ಬಿಸಿಯೂಟ ದುರಂತದಲ್ಲಿ ಅಸುನೀಗಿದ ವಿದ್ಯಾರ್ಥಿಗಳ ಸಂಖ್ಯೆ ಇಂದು 23ಕ್ಕೆ ಏರಿದೆ. ಮಂಗಳವಾರ ತಡರಾತ್ರಿ ವೇಳೆಗೆ ಸಾವಿನ ಸಂಖ್ಯೆ 16 ಆಗಿತ್ತು. ಬುಧವಾರ ಬೆಳಗ್ಗೆ ಸಾವಿನ ಸಂಖ್ಯೆ 22 ಆಗಿತ್ತು. ಇಂದು ಮಧ್ಯಾಹ್ನದ ವೇಳೆ ಅದು 23ಕ್ಕೆ ಏರಿದ್ದು, ಇನ್ನು ಹಲವು ವಿದ್ಯಾರ್ಥಿಗಳ ಸ್ಥಿತಿ ಗಂಭಿರವಾಗಿದೆ ಎನ್ನಲಾಗಿದೆ.