ಮೋದಿ 'ಹಿಂದು ರಾಷ್ಟ್ರೀಯವಾದಿ'
ಮುಂಬೈ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು 'ಹಿಂದು ರಾಷ್ಟ್ರೀಯವಾದಿ' ಎಂದು ಬಿಂಬಿಸುವುದರೊಂದಿಗೆ 2014ರ ಲೋಕಸಭಾ ಚುನಾವಣೆಗೆ ಬಿಜೆಪಿ ಸಜ್ಜುಗೊಂಡಿದೆ.
ಮುಂಬೈನ ಬಿಜೆಪಿ ಬ್ಲಾಕ್ ಘಟಕದ ಆವರಣದಲ್ಲಿ ಮೋದಿ ಅವರನ್ನು 'ಹಿಂದು ರಾಷ್ಟ್ರೀಯವಾದಿ' ಎಂಬ ಘೋಷಣೆಯ ಫಲಕಗಳು ರಾರಾಜಿಸುತ್ತಿವೆ. ಅಲ್ಲದೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಸಹ ಮುಂದೆ ತನ್ನ ಹಿಂದುತ್ವದ ಮುಖವನ್ನು ಅಭಿವ್ಯಕ್ತಗೊಳಿಸಲು ಮನಸುಮಾಡಿದಂತೆ ತೋರುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮೋದಿ ಅವರ ಹೇಳಿಕೆಗಳೆ ಇಂದು ಪ್ರಚಾರದ ಘೋಷ ವಾಕ್ಯಗಳಾಗಿ ಹೊರಹೊಮ್ಮುತ್ತಿವೆ. ಇಂತಹ ಕಾರ್ಯಕ್ಕೆ ಮುಂಬೈನಲ್ಲಿರುವ ಬಿಜೆಪಿ ಬ್ಲಾಕ್ ಘಟಕದ ಅಶೀಶ್ ಶೀಲಾರ್ ಮುಂದಾಗಿದ್ದಾರೆ.