ವೈದ್ಯಕೀಯ ಪ್ರವೇಶ ಪರೀಕ್ಷೆ 'ನೀಟ್' ರದ್ದುಗೊಳಿಸಿದ ಸುಪ್ರೀಂ
ವೈದ್ಯ ಸ್ನಾತಕೋತ್ತರ ಹಾಗೂ ಪದವಿ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ..
ನವದೆಹಲಿ: ವೈದ್ಯ ಸ್ನಾತಕೋತ್ತರ ಹಾಗೂ ಪದವಿ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು(ನೀಟ್) ಗುರುವಾರ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ನೀಟ್ ಪರೀಕ್ಷೆ ಕುರಿತು ಇಂದು ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ದೇಶಾದ್ಯಂತ ಒಂದೇ ರೀತಿಯ ಪ್ರವೇಶ ಪರೀಕ್ಷೆ ನಡೆಸುವ ಮತ್ತು ಅದನ್ನು ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜ್ಗಳ ಮೇಲೆ ಹೇರುವ ಅಧಿಕಾರ ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಗೆ ಇಲ್ಲ ಎಂದು ಹೇಳಿದೆ.
ನೀಟ್ ಪರೀಕ್ಷೆ ಮೂಲಕ ಈಗಾಗಲೇ ನಡೆದಿರುವ ಈ ವರ್ಷದ ದಾಖಲಾತಿಗೆ ಈ ತೀರ್ಪು ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಮತ್ತು ನ್ಯಾಯಾಧೀಶ ವಿಕ್ರಮ್ಜಿತ್ ಸೇನ್ ಅವರು ಹೇಳಿದ್ದಾರೆ.