ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಾರ್ಖಂಡ್ ಸ್ಪೀಕರ್ ರಾಜಿನಾಮೆ

Vishwanath S
Updated On : 19 Jul 2013, 3:46 am

ರಾಂಚಿ: ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಪಿ. ಸಿಂಗ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ.

ಜಾರ್ಖಂಡ್ ವಿಧಾನಸಭೆಯ ಉಪಾಧ್ಯಕ್ಷರು ಇಲ್ಲದ ಕಾರಣ, ಇಂದು ಮಧ್ಯಾಹ್ನ 3 ಗಂಟೆಗೆ ವಿಧಾನಸಭೆ ಕಾರ್ಯದರ್ಶಿಗೆ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸುವುದಾಗಿ ಸಿ.ಪಿ ಸಿಂಗ್ ಅವರು ಹೇಳಿದ್ದಾರೆ.

ನಿನ್ನೆ ಸದನದಲ್ಲಿ ವಿಶ್ವಾಸ ಮತ ಪಡೆದ ಹೇಮಂತ್ ಸೂರೇನ್ ನೇತೃತ್ವದ ನೂತನ ಸರ್ಕಾರ ಜಾರ್ಖಂಡ್‌ನಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಬಿಜೆಪಿಯಿಂದ ಆಯ್ಕೆಯಾಗಿರುವ ಸಿ.ಪಿ. ಸಿಂಗ್ ಅವರು ನಿನ್ನೆ ವಿಶ್ವಾಸ ಮತಯಾಚನೆ ಸಂಬಂಧ ನಡೆದ ವಿಶೇಷ ಅಧಿವೇಶನದಲ್ಲೇ ತಾವು ರಾಜಿನಾಮೆ ನೀಡುವು ಸುಳಿವು ನೀಡಿದ್ದರು.

ನೂತನ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಸ್ವೀಕರ್ ಸ್ಥಾನಕ್ಕೆ ರಾಜಿನಾಮೆ ನೀಡಿದ ಅವರು ಇನ್ನು ಮುಂದೆ ಪ್ರತಿಪಪಕ್ಷದ ಸದಸ್ಯರಾಗಿ ಕಾರ್ಯನಿರ್ವಹಿಸಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement