ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಸವಣ್ಣ ಈಗ 'ಬ್ರಾಹ್ಮಣ'

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ವೀರ ಬಸವಣ್ಣ' ಚಿತ್ರದ ಶೀರ್ಷಿಕೆಯನ್ನು ಚಿತ್ರದ ನಿರ್ದೇಶಕ ಕೊನೆಗೂ ಬದಲಾವಣೆ..

Lingaraj Badiger
Updated On : 19 Jul 2013, 1:22 am

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ವೀರ ಬಸವಣ್ಣ' ಚಿತ್ರದ ಶೀರ್ಷಿಕೆಯನ್ನು ಚಿತ್ರದ ನಿರ್ದೇಶಕ ಕೊನೆಗೂ ಬದಲಾವಣೆ ಮಾಡಿದ್ದಾರೆ. ಈಗ ಆ ಚಿತ್ರಕ್ಕೆ ಬಸವಣ್ಣ ಬದಲ 'ಬ್ರಾಹ್ಮಣ' ಎಂದು ಹೆಸರಿಡುವ ಮೂಲಕ ಮತ್ತೊಂದು ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ನಡುವೆ ಚಿತ್ರಕ್ಕೆ 'ಬ್ರಾಹ್ಮಣ' ಶೀರ್ಷಿಕೆ ನೀಡಲು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನಿರಾಕರಿಸಿದೆ ಎನ್ನಲಾಗಿದೆ.

ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿರುವ 'ಬಸವಣ್ಣ' ಚಿತ್ರ ತಂಡ ಇತ್ತೀಚಿಗೆ ವಿವಾದಾತ್ಮಕ ಪೋಸ್ಟರ್‌ವೊಂದು ಬಿಡುಗಡೆ ಮಾಡಿತ್ತು. ಇದಕ್ಕೆ ಬಸವಣ್ಣನ ಅನುಯಾಯಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದ ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು, ನಾನು ಮಾಡುತ್ತಿರುವುದು ಸಿನಿಮಾ. ಯಾರೋ ಮಹಾಪುರುಷನ ಜೀವನ ಚರಿತ್ರೆಯನ್ನೋ ಸಮುದಾಯ, ಜಾತಿ, ಧರ್ಮದ ಮೇಲೆ ಡಾಕ್ಯುಮೆಂಟರಿಯನ್ನೋ ಮಾಡುತ್ತಿಲ್ಲ. ಯಾವ ರೀತಿ ಸಿನಿಮಾ ಮಾಡಬೇಕು, ಯಾವ ಹೆಸರು, ಕಥೆ ಇಟ್ಟುಕೊಳ್ಳಬೇಕು ಎಂಬುದು ನಿರ್ದೇಶಕನ ವಿವೇಚನೆ. ಹೀಗಾಗಿ ಯಾರೋ ವಿರೋಧ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನಾನ್ಯಾಕೆ ಹಿಂಜರಿಯಬೇಕು? ನನ್ನ ಚಿತ್ರದ ಶೀರ್ಷಿಕೆಯನ್ನೇಕೆ ಬದಲಾಯಿಸಬೇಕು? ಎಂದು ಪ್ರಶ್ನಿಸಿದ್ದರು.

ಆದರೆ ಕೇವಲ ಚಿತ್ರಕ್ಕೆ 'ಬಸವಣ್ಣ' ಎಂಬ ಹೆಸರಿಟ್ಟಿದ್ದರೆ ಯಾರೂ ಗಮನಿಸುತ್ತಿರಲ್ಲವೆನೋ? ಆದರೆ ರುದ್ರಾಕ್ಷಿ, ವಿಭೂತಿ, ಅದರ ಮಧ್ಯೆ ಕೆಂಪು ನಾಮ (ಶಿವನ ಮೂರನೇ ಕಣ್ಣು), ಪಕ್ಕದಲ್ಲೇ ಹೊಸ ಪಿಸ್ತೂಲು, ಹಸ್ತಮುದ್ರಿಕೆ... ಇವುಗಳನ್ನೊಳಗೊಂಡ 'ಪೋಸ್ಟರ್‌' ವೀರಶೈವರ ಅಸಮಾಧಾನಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement