ಬೀಚಿಂಗ್ ಎರ್ಪೋರ್ಟ್ನಲ್ಲಿ ಬಾಂಬ್ ಸ್ಫೋಟ: ಓರ್ವನಿಗೆ ಗಾಯ
ಬೀಚಿಂಗ್: ಬೀಚಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ವ್ಯಕ್ತಿಯೋರ್ವ ಶನಿವಾರ ಆತ್ಮಹುತಿ ನಾಡಬಾಂಬ್ ಸ್ಫೋಟಿಸಿದ್ದಾನೆ. ಘಟನೆಯಲ್ಲಿ ಸ್ವತಃ ಆ ವ್ಯಕ್ತಿಯೇ ಗಾಯಗೊಂಡಿದ್ದು, ಯಾವುದೇ ಸಾವು ನೋವು ಸಂಭಂವಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ವ್ಯಕ್ತಿಯೋರ್ವ ತಾನು ಕುಳಿತ್ತಿದ್ದ ವಿಲ್ಚೇರ್ಗೆ ಪುರ್ವನಿಯೋಜಿತವಾಗಿ ನಾಡಬಾಂಬ್ ಅನ್ನು ಒಳಜೋಡಿಣೆ ಮಾಡಿಕೊಂಡಿದ್ದು, ಸಂಜೆ 6.30ರ ಸುಮಾರಿಗೆ ವಿಮಾನ ನಿಲ್ದಾಣದ ಹೊರಗಡೆ ಸ್ಫೋಟಿಸಿದ್ದಾನೆ. ಸ್ಫೋಟದಿಂದಾಗ ಸ್ವತಃ ಆತ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸ್ಫೋಟದಿಂದಾಗಿ ವಿಮಾನ ನಿಲ್ದಾಣದ ತುಂಬ ಹೊಗೆ ತುಂಬಿಕೊಂಡಿದೆ. ಆದರೆ ವಿಮಾನಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪರಿಶೀಲಿಸಿದಾಗಿ ಸ್ಫೋಟದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹುತಿ ಬಾಂಬ್ ದಾಳಿ ನಡೆಸಿರುವ ವ್ಯಕ್ತಿಯನ್ನು ಜೀ ಝಂಗ್ಜಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಝಂಗ್ಜಿಂಗ್ಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.